“ಆಮ್ಲಜನಕ ಕೊರತೆಯಿಂದ ಸಾವುಗಳೇ ಸಂಭವಿಸಿಲ್ಲ ಎಂಬ ಕೇಂದ್ರದ ಪ್ರತಿಪಾದನೇ ಶುದ್ಧ ಸುಳ್ಳು”..!  

1 min read

“ಆಮ್ಲಜನಕ ಕೊರತೆಯಿಂದ ಸಾವುಗಳೇ ಸಂಭವಿಸಿಲ್ಲ ಎಂಬ ಕೇಂದ್ರದ ಪ್ರತಿಪಾದನೇ ಶುದ್ಧ ಸುಳ್ಳು”..!

ಕೊರೊನಾ 2ನೇ ಅಲೆ ದೇಶದ ಜನತೆಯನ್ನು ಇನ್ನಿಲ್ಲದಂತೆ ಕಾಡಿದೆ. ಈ ಅಲೆಯಲ್ಲಿ ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿದ್ದು, ಇದರ ಜೊತೆಗೆ ಬ್ಲಾಕ್, ವೈಟ್ ಫಂಗಸ್ , ಯೆಲ್ಲೂ, ಹಸರು ಫಂಗಸ್ , ಡೆಲ್ಟಾ , ಲ್ಯಾಂಬ್ಡಾ , ಜಿಕಾ , ಕಪ್ಪಾ ವೈರಸ್ ಳ ಆಕಂತ ಜನರನ್ನ ಆತಂಕಕ್ಕೆ ಈಡು ಮಾಡಿದೆ.. ಈ ನಡುವೆ ಕೋವಿಡ್ 3ನೇ ಅಲೆ ಎಚ್ಚರಿಕೆ ನೀಡಲಾಗಿದ್ದು, ಇದರ ಪರಿನಾಮವೂ ಅಷ್ಟೇ ಭೀಕರವಾಗಿರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಕೋವಿಡ್ 2ನೇ ಅಲೆ ವೇಳೆ ಲಸಿಕೆ ಕೊರತೆ ಆಕ್ಸಿಜನ್ ಕೊರತೆ ಬೆಡ್ ಸಿಗದೇ ಅನೇಕರ ಜೀವ ಹೋಗಿದೆ.. ಈ ನಡುವೆ ಕೇಂದ್ರ ಮಂಗಳವಾರ ಆಮ್ಲಜನಕ ಕೊರತೆಯಿಂದಾಗಿ ಯಾವುದೇ ಜೀವ ಹೋಗಿಲ್ಲ ಎಂದು ರಾಜ್ಯಸಭೆಯಲ್ಲಿ ಪ್ರತಿಪಾದಿಸಿರುವುದು ಪ್ರತಿಪಕ್ಷಗಳ ನಾಯಕರನ್ನ ಕೆರಳಿಸಿದೆ.

ಈ ನಡುವೆ ದೆಹಲಿ ಮತ್ತು ದೇಶದ ಹಲವೆಡೆ ಆಮ್ಲಜನಕ ಕೊರತೆಯಿಂದ ಹಲವು ಸಾವುಗಳು ಸಂಭವಿಸಿವೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ಬುಧವಾರ ತಿಳಿಸಿದರು. ಒಂದು ವೇಳೆ ಆಮ್ಲಜನಕ ಕೊರತೆಯಿಲ್ಲದಿದ್ದರೆ, ಆಸ್ಪತ್ರೆಗಳು ನ್ಯಾಯಾಲಯದ ಮೊರೆ ಏಕೆ ಹೋಗುತ್ತಿದ್ದವು. ಮಾಧ್ಯಮಗಳು ಆಮ್ಲಜನಕ ಕೊರತೆ ಬಗ್ಗೆ ಪ್ರತಿನಿತ್ಯ ವರದಿ ಮಾಡುತ್ತಿದ್ದವು. ಆಸ್ಪತ್ರೆಗಳು ಹೇಗೆ ಆಮ್ಲಜನಕಕ್ಕಾಗಿ ಪರದಾಡುತ್ತಿದ್ದವು ಎಂಬುದನ್ನು ಟಿ.ವಿ ಚಾನೆಲ್‌ಗಳು ತೋರಿಸುತ್ತಿದ್ದವು. ಹಾಗಾಗಿ ಆಮ್ಲಜನಕ ಕೊರತೆಯಿಂದ ಯಾರೂ ಮೃತಪಟ್ಟಿಲ್ಲ ಎನ್ನುವುದು ಶುದ್ಧ ಸುಳ್ಳು. ದೆಹಲಿ ಮತ್ತು ಹಲವು ಭಾಗಗಳಲ್ಲಿ ಆಮ್ಲಜನಕ ಕೊರತೆಯಿಂದ ಹಲವರು ಸಾವಿಗೀಡಾಗಿದ್ದಾರೆ ಎಂದು  ಹೇಳಿದ್ದಾರೆ.

ಬಿಎಸ್‍ವೈ “ಚಮಚ” ಆಗಲಿಲ್ಲ ಎಂದು ಬದಲಾವಣೆ ಪ್ರಯತ್ನ : ಬಿಎಸ್ ವೈ ಪರ ಸುಬ್ರಮಣಿಯನ್ ಬ್ಯಾಟ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd