SBI ಗ್ರಾಹಕರಿಗೆ ಸಿಹಿ ಸುದ್ಧಿ – ಎಟಿಎಂ ವಂಚನೆ ತಪ್ಪಿಸಲು ಓಟಿಪಿ ವ್ಯವಸ್ಥೆ
ಎಸ್ ಬಿ ಐ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ. ಎ ಟಿ ಎಂ ವಂಚನೆಗಳು ತಡೆಯಲು ಎಸ್ ಬಿ ಐ ಹೊಸ ಪರಿಹಾರವೊಂದನ್ನ ಕಂಡುಕೊಂಡಿದೆ. ಇದರಿಂದ ಬ್ಯಾಂಕ್ ಗೆ ಸಂಬಂಧಿಸಿದ ಅಪರಾಧಗಳನ್ನ ಕಡಿಮೆ ಮಾಡುವುದು ಎಸ್ ಬಿ ಯ ನ ಗುರಿಯಾಗಿದೆ.
ಎಸ್ ಬಿ ಐ ಎಟಿಎಂ ಗಳಿಂದ ಓಟಿಪಿ ಮೂಲಕ ನಗದು ಬಿಡಿಸುವ ವ್ಯವಸ್ಥೆಯನ್ನ ಎಸ್ ಬಿ ಯ ಪರಿಚಯಿಸಲಿದೆ ಇದು ಎಟಿಎಂ ಮೂಲಕ ಆಗಬಹುದಾದ ವಂಚನೆಗಳಿಂದ ತಡೆದು ಹೆಚ್ಚಿನ ಭದ್ರತೆಯನ್ನ ನೀಡಲಿದೆ. ಎಟಿಎಂ ಮೂಲಕ ಹಣ ಪಡೆಯುವವರು ಮೊಬೈಲ್ ಗೆ ಓಟಿಪಿಯನ್ನ ಪಡೆಯುತ್ತಾರೆ ಇದನ್ನು ಪರಿಶೀಲಿಸದ ನಂತರವೇ ಅವರು ಹಣ ಪಡೆಯಲು ಸಾಧ್ಯವಾಗುತ್ತದೆ.
ನೀವು ಬ್ಯಾಂಕ್ ಅಕೌಂಟಿಗೆ ನೊಂದಾಯಿಸಿದ ಮೊಬೈಲ್ ನಂಬರ್ ಗೆ ಓಟಿಪಿ ಬರಲಿದೆ ಅದನ್ನ ನಿಗದಿತ ಸಮಯಕ್ಕೆ ನಮೂದಿಸಿದರೆ ಮಾತ್ರ ಹಣವನ್ನ ನೀವು ವಿತ್ ಡ್ರಾ ಮಾಡಿಕೊಳ್ಳಬಹುದು.








