ಬೆಂಗಳೂರು: ಮೈಕ್ರೋ ನ್ಯಾನೋ ಟೆಕ್ನಾಲಜಿ ಇನ್ಸ್ಟಿಟ್ಯೂಟ್ ನ ವಿಜ್ಞಾನಿ ಅಶುತೋಷ್ ಸಿಂಗ್ ಎಂಬುವವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ವಿಜ್ಞಾನಿಯ ಕಾರಿನ ಮೇಲೆ ಮೊದಲು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ನಾಲ್ವರು ಅಪರಿಚಿತರು ತಡೆದು ಹಿಂಭಾಗದ ಗ್ಲಾಸ್ ನ್ನು ಪುಡಿ ಮಾಡಿದ್ದಾರೆ. ನಂತರ ಹಲ್ಲೆಗೆ ಮುಂದಾದಾಗ ಅಶುತೋಷ್ ಅವರು ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಹೋಗಿದ್ದಾರೆ.
ನಂತರ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಆದರೆ, ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ.