ರಾಮನಗರ: ಜಿಲ್ಲೆಯ ಬಿಡದಿ ತೋಟದಲ್ಲಿ ನಡೆದಿದ್ದ ಜೆಡಿಎಸ್ ಸಭೆಯಲ್ಲಿ ಖದೀಮನೊಬ್ಬ ಜೇಬಿಗೆ ಕತ್ತರಿ ಹಾಕಿ ಸಿಕ್ಕಿ ಬಿದ್ದಿದ್ದಾನೆ.
ಕಾರ್ಯಕರ್ತನ ಜೇಬಿನಲ್ಲಿದ್ದ 40 ಸಾವಿರ ರೂ. ಕಳ್ಳತನ (Theft) ಮಾಡಿದ್ದಾನೆ. ಜೆಡಿಎಸ್ ಹಾಲಿ ಮತ್ತು ಮಾಜಿ ಶಾಸಕರು ಈ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಕುಂದಾಪುದ ಜೆಡಿಎಸ್ ಕಾರ್ಯಕರ್ತನ ಜೇಬಿಗೆ ಕೈ ಹಾಕಿ 40 ಸಾವಿರ ರೂ. ಎಗರಿಸಿದ್ದಾನೆ.
ಕೂಡಲೇ ಎಚ್ಚೆತ್ತುಕೊಂಡ ಕಾರ್ಯಕರ್ತರು ಕಳ್ಳನನ್ನು ಹಿಡಿದಿದ್ದಾರೆ. ನಂತರ ಅಲ್ಲಿದ್ದ ಗನ್ ಮ್ಯಾನ್ ಗಳು ಗೂಸಾ ನೀಡಿದ್ದಾರೆ.