ಮಂಡ್ಯ: ಕೇಂದ್ರ ಸಚಿವ ಕುಮಾರಸ್ವಾಮಿ(H.D Kumaraswamy) ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ (D.K Shivakumar) ಮತ್ತೆ ವ್ಯಂಗ್ಯವಾಡಿದ್ದಾರೆ.
ಶುಭ ಮುಹೂರ್ತ ನೋಡಿ ನನ್ನ ಅಕ್ರಮದ ದಾಖಲೆಗಳನ್ನು ಬೇಗ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದ್ದಾರೆ. ಕುಮಾರಸ್ವಾಮಿ ಕುತಂತ್ರ 20 ವರ್ಷಗಳಿಂದ ನಡೆಯುತ್ತಿದೆ. ಇಡಿ, ಸಿಬಿಐ ಏನೇನೂ ಬೇಕು ಎಲ್ಲವನ್ನೂ ಜಾಲಾಡುತ್ತಿವೆ. ಈಗ ಕುಮಾರಸ್ವಾಮಿ ಕೂಡ ಅದನ್ನೇ ಮಾಡುತ್ತಿದ್ದಾರೆ. ನನ್ನ ಬದುಕು ತೆರೆದ ಪುಸ್ತಕ, ನನಗೆ ತೊಂದರೆ ಇಲ್ಲ. ಜೆಡಿಎಸ್ ಹಾಗೂ ಬಿಜೆಪಿ ಪಾದಯಾತ್ರೆ ನನಗೆ ವರವಾಗಿದೆ ಎಂದು ಹೇಳಿದ್ದಾರೆ.
ಬಹಿರಂಗ ಚರ್ಚೆಗೆ ಕುಮಾರಸ್ವಾಮಿ ಆಹ್ವಾನ ನೀಡಿರುವ ವಿಚಾರವಾಗಿ ಮಾತನಾಡಿದ ಅವರು, ಚಾಮುಂಡಿ ಬೆಟ್ಟಕ್ಕೆ ಬೇಡ, ಅಸೆಂಬ್ಲಿಗೆ ಬರಲಿ. ಕುಮಾರಸ್ವಾಮಿ ಅಸೆಂಬ್ಲಿಗೆ ಬರಲು ಆಗಲ್ಲ. ಅವರ ಅಣ್ಣನನ್ನು ಕಳುಹಿಸಲಿ. ಅದ್ಯಾವ ದಲಿತ ಕುಟುಂಬ ಎಂದು ಪಟ್ಟಿ ಕೊಡೋಕೆ ಹೇಳಿ. ಇವನು ಮುಖ್ಯಮಂತ್ರಿಯಾಗಿದ್ದನ್ನಲ್ಲ, ತನಿಖೆ ಮಾಡಿಸಿದ್ದಾನಲ್ಲ, ಅದ್ಯಾವ ದಲಿತ ಕುಟುಂಬ ತಂದು ನಿಲ್ಲಿಸಲಿ ಎಂದು ಅವರು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.