ಶ್ರೀನಗರ : ಗಡಿಯಲ್ಲಿ ಪಾಕ್ ನ ಮತ್ತೊಂದು ಕಳ್ಳಾಟ ಪತ್ತೆಯಾಗಿದೆ. ಜಮ್ಮು ಹಾಗೂ ಕಾಶ್ಮೀರದ (Jammu and Kashmir) ಅಖ್ನೂರ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಹತ್ತಿರ ಈ ಘಟನೆ ಬಯಲಿಗೆ ಬಂದಿದೆ.
ಅಪಾರ ಶಸ್ತ್ರಾಸ್ತ್ರ ಮತ್ತು 35 ಸಾವಿರ ರೂ. ನಗದು ಒಳಗೊಂಡ ಎರಡು ಡ್ರೋನ್ ಪ್ಯಾಕೆಟ್ ಗಳನ್ನು ಸೇನೆ ವಶಕ್ಕೆ ಪಡೆದಿದೆ. ವಿಧ್ವಂಸಕ ಚಟುವಟಿಕೆ ನಡೆಸಲು ಉಗ್ರರಿಗೆ ತಲುಪಿಸಲು ಪಾಕಿಸ್ತಾನಿ (Pakistan) ಡ್ರೋನ್‍ಗಳು ಈ ಪ್ಯಾಕೆಟ್‍ಗಳನ್ನು ಬೀಳಿಸಿವೆ ಎಂಬ ಸಂಶಯ ವ್ಯಕ್ತವಾಗಿದೆ.
ಕೂಡಲೇ ಸೇನೆ ಮತ್ತು ಪೊಲೀಸರು ಬಾಂಬ್ ನಿಷ್ಕ್ರಿಯ ದಳ ಜಂಟಿ ಕಾರ್ಯಾಚರಣೆ ನಡೆಸಿವೆ. ಈ ಸಂದರ್ಭದಲ್ಲಿ ಹಲವು ವಸ್ತುಗಳು ಪತ್ತೆಯಾಗಿವೆ.