ಬೆಂಗಳೂರು: 5 ಖಾಸಗಿ ಬಸ್ ಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿ, ಕನಿಷ್ಠ 25 ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ, ನೆಲಮಂಗಲ (Nelamangala) ತಾಲೂಕಿನ ತೊಣಚಿನಗುಪ್ಪೆ ಹತ್ತಿರ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ತೆರಳಿ, ತೆರವುಗೊಳಿಸಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ಬಸ್ ಬಸ್ ಗಳ ಮಧ್ಯೆ ಸಿಲುಕಿರುವ ಜನರು ಜನರನ್ನ ಹೊರಗೆ ತೆಗೆಯಲಾಗಿದೆ.
ಮಂಜಿನಿಂದಾಗಿ ರಸ್ತೆ ಕಾಣದ ಹಿನ್ನೆಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.