ಮೈಸೂರು: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯ ಶಿಕ್ಷಕನನ್ನು ಅಮಾನತು ಮಾಡಿರುವ ಘಟನೆ ನಡೆದಿದೆ.
ಈ ಘಟನೆ ನಂಜನಗೂಡು ತಾಲೂಕಿನ ದಾಸನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ್ ಅಮಾನತುಗೊಂಡ ಶಿಕ್ಷಕ. ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಾನೆಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದರು.
ಬೇಕಂತಲೇ ಮಾತನಾಡುವಾಗ ಮೈ,ಕೈ ಮುಟ್ಟುವುದು, ಅಸಭ್ಯವಾಗಿ ವರ್ತಿಸುತ್ತಾನೆಂದು ಮಕ್ಕಳು, ಪಾಲಕರ ಮುಂದೆ ಹೇಳಿದ್ದಾರೆ. ಆಕ್ರೋಶಗೊಂಡ ಪಾಲಕರು, ದೂರು ನೀಡಿದ್ದರು. ಸದ್ಯ ಪ್ರಕರಣದ ಕುರಿತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ವಜಾಕ್ಕೆ ಡಿಡಿಪಿಐಗೆ ಶಿಫಾರಸ್ಸು ಮಾಡಲಾಗಿದೆ.








