ಡ್ರಗ್ಸ್ ಕೇಸ್ : ನಟ ಶಾರೂಖ್ ಪುತ್ರ ಆರ್ಯನ್ ಎನ್ ಸಿಬಿ ವಶಕ್ಕೆ shahrukh saaksha tv
ಮುಂಬೈ : ಡ್ರಗ್ಸ್ ವ್ಯೂಹದಲ್ಲಿ ಬಾಲಿವುಡ್ ನ ಬಾದ್ ಷಾ ಶಾರೂಕ್ ಖಾನ್ ಪುತ್ರ ಆರ್ಯನ್ ಸಿಕ್ಕಿ ಹಾಕಿಕೊಂಡಿದ್ದಾರೆ.
ಶನಿವಾರ ಮುಂಬೈ ಸಮುದ್ರದ ಮಧ್ಯದಲ್ಲಿ ಐಶಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಲಾಗುತ್ತಿತ್ತು.
ಇದರ ಖಚಿತ ಮಾಹಿತಿ ತಿಳಿದ ಎನ್ಸಿಬಿ ಅಧಿಕಾರಿಗಳು ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ ಪಾರ್ಟಿಯಲ್ಲಿದ್ದ ಶಾರೂಖ್ ಪುತ್ರ ಸೇರಿ ಒಟ್ಟು 10 ಮಂದಿಯನ್ನು ಎನ್ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ದಾಳಿ ವೇಳೆ ಕೊಕೇನ್, ಎಂಡಿಎಂ, ಹಾಶಿಶ್ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸದ್ಯ ಆರ್ಯನ್ ಎನ್ ಸಿಬಿ ಅಧಿಕಾರಿಗಳ ವಶದಲ್ಲಿದ್ದು, ಅವರ ಮೊಬೈಲ್ ಅನ್ನು ಅಧಿಕಾರಿಗಳು ಸ್ಕ್ಯಾನ್ ಮಾಡುತ್ತಿದ್ದಾರೆ ಮತ್ತು ಫೋನ್ ಚಾಟ್ ಲಿಸ್ಟ್ ಕುರಿತಂತೆ ಪರಿಶೀಲನೆ ನಡೆಸುತ್ತಿದ್ದಾರೆ.