ಚಾಮರಾಜನಗರ: ಕಾಂಗ್ರೆಸ್ ಜೀವಂತವಾಗಿದ್ದರೆ ಶಾಮನೂರು ಶಿವಶಂಕರಪ್ಪ (Shamanur Shivashankarappa)ರನ್ನು ಹೊರಗೆ ಹಾಕಲಿ ಎಂದು ಹಿರಿಯ ರಾಜಕಾರಣಿ ಎಚ್.ವಿಶ್ವನಾಥ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಮನೂರು ಹಿರಿಯ ಮುತ್ಸದ್ದಿಯಲ್ಲ, ಜಾತಿವಾದಿ. ಕಾಂಗ್ರೆಸ್ ನಿಂದ ಟಿಕೆಟ್ ಪಡೆದು, ಶಾಸಕರಾಗಿ, ಸಚಿವರಾಗಿದ್ದರು. ಅಲ್ಲದೇ, ಮಗ ಮಂತ್ರಿಯಾಗಿ ಅಧಿಕಾರದಲ್ಲಿದ್ದರೂ ಬೇರೆ ಪಾರ್ಟಿಗೆ ಕ್ಯಾನ್ವಾಸ್ ಮಾಡ್ತಿಯಲ್ಲ ಏನ್ ಹೇಳ್ಬೇಕು ಎಂದು ಪ್ರಶ್ನಿಸಿದ್ದಾರೆ.
ನಿಗಮ ಮಂಡಳಿ ಸ್ಥಾನಗಳನ್ನು ಶಾಸಕರಿಗೆ ನೀಡಬಾರದು ಎಂದು ನಾನು ವೀರೇಂದ್ರ ಪಾಟೀಲ್ ಅವರ ಕಾಲದಲ್ಲಿಯೇ ಹೇಳಿದ್ದೆ. ಇತ್ತೀಚೆಗಷ್ಟೇ ಶಾಮನೂರು ಬಿ.ವೈ. ರಾಘವೇಂದ್ರ, ವಿಜಯೇಂದ್ರ ಪರ ಬ್ಯಾಟ್ ಬೀಸಿದ್ದರು. ಅದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು.