UAE ನೂತನ ಅಧ್ಯಕ್ಷರಾಗಿ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ನೇಮಕ….
1 min read
UAE ನೂತನ ಅಧ್ಯಕ್ಷರಾಗಿ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ನೇಮಕ….
ಯುನೈಟೆಡ್ ಅರಬ್ ಎಮಿರೇಟ್ಸ್ನ ನೂತನ ಅಧ್ಯಕ್ಷರನ್ನಾಗಿ ಶನಿವಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಸುಪ್ರೀಂ ಕೌನ್ಸಿಲ್ ಆಯ್ಕೆ ಮಾಡಿದೆ.
ಶುಕ್ರವಾರ ತಮ್ಮ 73 ನೇ ವಯಸ್ಸಿನಲ್ಲಿ ನಿಧನರಾದ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಿಧನದ ನಂತರ ತರವಾದ ಸ್ಥಾನಕ್ಕೆ 31 ವರ್ಷದ ಶೇಖ್ ಮೊಹಮ್ಮದ್ ಬಿನ್ ಅವರನ್ನ ಅಧ್ಯಕ್ಷರನ್ನಾಗಿ ಆರಿಸಲಾಗಿದೆ. ಮಾಜಿ ಅಧ್ಯಕ್ಷರ ಸಹೋದರರಾಗಿರುವ ಮೊಹಮ್ಮದ್ ಬಿನ್ ಜಾಯೆದ್, 2014 ರಲ್ಲಿ ಖಲೀಫಾ ಪಾರ್ಶ್ವವಾಯುವಿಗೆ ಒಳಗಾದ ನಂತರ ಯುಎಇಯ ವಾಸ್ತವಿಕ ಆಡಳಿತಗಾರರಾಗಿ ಮುನ್ನಡೆಸುತ್ತಿದ್ದಾರೆ.
ನವೆಂಬರ್ 2004ರಿಂದ ಅಬುಧಾಬಿಯ ರಾಜಕುಮಾರನಾಗಿರುವ ಶೇಖ್ ಮಹಮ್ಮದ್ ಬಿನ್ ಝಾಯೆದ್, ಅಬುಧಾಬಿಯ 17ನೇ ದೊರೆಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಧ್ಯಕ್ಷರಾಗಿದ್ದ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ನಿನ್ನೆ ನಿಧನರಾದ ಹಿನ್ನೆಲೆಯಲ್ಲಿ 40 ದಿನಗಳ ಶೋಕಾಚರಣೆ ಘೋಷಿಸಲಾಗಿದೆ.