“ಅಕ್ಕ ಬೆಳಗ್ಗೆ ಯೋಗ ಕಲಿಸ್ತಾರೆ, ಭಾವ ರಾತ್ರಿ ಯೋಗ ಕಲಿಸ್ತಿದ್ದಾರೆ “: ಟ್ರೋಲ್ ಗೆ ಗುರಿಯಾದ ಶಿಲ್ಪಾ ತಂಗಿ ಶಮಿತಾ..!
ಮುಂಬೈ: ಅಶ್ಲೀಲ ಪ್ರಕರಣದಲ್ಲಿ ಬಾಲಿವುಡ್ ಖ್ಯಾತ ನಟಿ, ಫಿಟ್ನೆಸ್ ಫ್ರೀಕ್ ಶಿಲ್ಪಾ ಶೆಟ್ಟಿಯ ಪತಿ , ಉದ್ಯಮಿ ಬಂಧನವಾಗಿದೆ.. ಅವರನ್ನ ಜುಲೈ 27ರರವರೆಗೂ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.. ಈ ನಡುವೆ ರಾಜ್ ಕುಂದ್ರ, ಶಿಲ್ಪಾ ಶೆಟ್ಟಿ ಹಾಗೂ ಸಹೋದರಿ ಶಮಿತಾ ಶೆಟ್ಟಿ ಸಿಕ್ಕಾಪಟ್ಟೆ ಟ್ರೋಲ್ ಗೆ ಗುರಿಯಾಗಿದ್ದಾರೆ..
ಅಂದ್ಹಾಗೆ ಜು.23ರಂದು ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಮೂಲಕ ಹಂಗಮಾ 2 ಸಿನಿಮಾ ರಿಲೀಸ್ ಆಯಿತು. ಹಲವು ವರ್ಷಗಳ ಬಳಿಕ ಶಿಲ್ಪಾ ಶೆಟ್ಟಿ ನಟಿಸಿರುವ ಸಿನಿಮಾ ಇದು. ಅದಕ್ಕಾಗಿ ಅಕ್ಕನಿಗೆ ಶಮಿತಾ ಶೆಟ್ಟಿ ಶುಭ ಕೋರಿದ್ದಾರೆ. 14 ವರ್ಷಗಳ ನಂತರ ನಿನ್ನ ನಟನೆಯ ಹಂಗಾಮಾ 2 ರಿಲೀಸ್ ಆಗುತ್ತಿದೆ. ನಿನಗೆ ಶುಭವಾಗಲಿ. ನೀನು ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದೀಯ ಎನ್ನುವುದು ಗೊತ್ತು. ನಾನು ನಿನ್ನ ಜೊತೆ ಸದಾ ಇರುತ್ತೇನೆ. ನೀನು ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಿ. ಪ್ರತಿ ಬಾರಿ ಮತ್ತಷ್ಟು ಸ್ಟ್ರಾಂಗ್ ಆಗುತ್ತಿದ್ದಿ. ಈ ಕಷ್ಟವೂ ಕಳೆದು ಹೋಗುತ್ತದೆ. ಹಂಗಾಮಾ 2 ತಂಡಕ್ಕೆ ಆಲ್ ದಿ ಬೆಸ್ಟ್ ಎಂದು ಶಮಿತಾ ಬರೆದುಕೊಂಡಿದ್ದಾರೆ.
ಇದ್ರ ಬೆನ್ನಲ್ಲೇ ನೆಟ್ಟಿಗರು ಶಮಿತಾ ಅವರನ್ನ ಇನ್ನಿಲ್ಲದಂತೆ ಟ್ರೋಲ್ ಮಾಡ್ತಾ ಇದ್ದಾರೆ.. ಕಮೆಂಟ್ ಗಳ ಮೂಲಕ ವ್ಯಂಗ್ಯವಾಡ್ತಾ ಇದ್ದಾರೆ.. ಅದ್ರಲ್ಲೂ ನೆಟ್ಟಿಗರಬ್ರು ನಿಮ್ಮ ಅಕ್ಕ ನಮಗೆ ಬೆಳಗ್ಗಿನ ಯೋಗ ಪೋಸ್ಗಳನ್ನು ಕಲಿಸಿಕೊಡುತ್ತಾರೆ. ಆದರೆ ನಿಮ್ಮ ಭಾವ ರಾತ್ರಿಯ ಯೋಗಪೋಸ್ಗಳನ್ನು ಕಲಿಸಿಕೊಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇದರ ಸ್ಕ್ರೀನ್ ಸಾಟ್ ಗಳಳು ಎಲ್ಲೆಡೆ ಹರಿದಾಡ್ತಿದೆ. ರಾಜ್ ಕುಂದ್ರಾ ಹೇಗಿದ್ದಾರೆ. ಅವರನ್ನು ಯಾಕೆ ಪೊಲೀಸರು ಹಿಡಿದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಶಿಲ್ಪಾಗಿಂತಲೂ ಹೆಚ್ಚು ಶುಭ ಹಾರೈಕೆ ಬೇಕಿರುವುದು ಅವರಿಗೆ ಎಂದೂ ಕೂಡ ಹಲವಾರು ಕಾಮೆಂಟ್ ಗಳು ಬಂದಿವೆ. ಅಲ್ಲದೇ ಮಾಡೆಲ್ ಗೆಹನಾ ಆರೋಪದಂತೆ ಶಮಿತಾ ಶಮಿತಾ ಶೆಟ್ಟಿ ಜೊತೆಗೂ ರಾಜ್ ಕುಂದ್ರಾ ಒಂದು ಸಿನಿಮಾ ಮಾಡಿ, ಅದನ್ನು ಆ್ಯಪ್ನಲ್ಲಿ ಪ್ರಸಾರ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದರು ಎನ್ನಲಾಗಿದೆ..