SHIVALINGA ದೇವಾಲಯ ನವೀಕರಣ ವೇಳೆ ಶಿವಲಿಂಗ ಪತ್ತೆ
ಉಡುಪಿ : 50 ಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಬಿದ್ದುಹೋಗಿದ್ದ ದೇವಾಲಯವನ್ನು ಜೀರ್ಣೋದ್ಧಾರ ಮಾಡುವ ವೇಳೆ ಪ್ರಾಚೀನ ಕಾಲದ ಶಿವಲಿಂಗ ಪತ್ತೆಯಾಗಿರುವ ಘಟನೆ ಕುಂದಾಪುರ ತಾಲೂಕು ಬಿಲ್ಲಾಡಿಯ ಕದ್ರಂಜೆಯಲ್ಲಿ ನಡೆದಿದೆ.
50 ವರ್ಷಗಳ ಹಿಂದೆಯೇ ಪ್ರಾಚೀನ ಮಹಾಲಿಂಗೇಶ್ವರ ದೇವಸ್ಥಾನ ಬಿದ್ದುಹೋಗಿತ್ತು.
ಇದರ ನವೀಕರಣ ಪ್ರಕ್ರಿಯೆಗಳು ಆರಂಭವಾಗಿದ್ದು, ನೆಲಸಮವಾಗಿದ್ದ ಗರ್ಭಗುಡಿಯಲ್ಲಿ ಪ್ರಾಚೀನ ಶಿವಲಿಂಗ ದೊರೆತಿದೆ.
ಕಳೆದ ನಾಲ್ಕೂವರೆ ದಶಕಗಳಿಗೆ ಮಿಕ್ಕಿ ಪಾಳು ಬಿದ್ದ ಈ ದೇವಾಲಯವನ್ನು ಯುವಕರೆಲ್ಲಾ ಸೇರಿ ಜೀರ್ಣೋದ್ಧಾರ ಮಾಡುವುದಕ್ಕೆ ಮುಂದಾಗಿದ್ದಾರೆ.
ಜೀರ್ಣೋದ್ಧಾರಕ್ಕಾಗಿ ಈಗಾಗಲೇ ಪ್ರಶ್ನಾ ಚಿಂತನೆಗಳು ನಡೆದಿದ್ದು, ಪುನರುತ್ಥಾನ ಕಾರ್ಯ ನಡೆಯುತ್ತಿದೆ.
ಸದ್ಯ ಮಣ್ಣಿನ ಅಡಿಯಲ್ಲಿ ಹೂತು ಹೋಗಿದ್ದ ಶಿವನ ಲಿಂಗವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಹೊರ ತೆಗೆದು ಪೂಜೆ ಸಲ್ಲಿಸಲಾಗುತ್ತಿದೆ.