ಶಿವಣ್ಣನ ಬರ್ತ್ ಡೇ ಮುಂಚೆಯೇ ಮತ್ತೊಂದು ಭರ್ಜರಿ ಗುಡ್ ನ್ಯೂಸ್
ಜುಲೈ 12 ಅಂದ್ರೆ ನಾಳೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬವಿದೆ.. ಹೀಗಾಗಿ ಅವರ ಬರ್ತ್ ಡೇ ಮುಂಚೆಯೇ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಗುಡಡ್ ನ್ಯೂಸ್ ಸಿಗುತ್ತಿದೆ.. ನಿನ್ನೆ ಶಿವಣ್ಣನ 123ನೇ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ.. 123ನೇ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಆಕ್ಷನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಈ ಪೋಸ್ಟರ್ ನಲ್ಲಿ ಡಾಲಿ ಧನಂಜಯ್ ಸಹ ದರ್ಶನ ನೀಡಿದ್ದಾರೆ..
ಇದೀಗ ಮತ್ತೊಂದು ಬಿಗ್ ಬ್ಯೂಸ್ ಸಿಕ್ಕಿದೆ.. ಹೌದು ಶಿವಣ್ಣನ 126ನೇ ಸಿನಿಮಾದ ಅಪ್ಡೇಟ್ ಸಿಕ್ಕಿದೆ. ಹೌದು, ಶಿವಣ್ಣ ನಟನೆಯಲ್ಲಿ ಬರಲಿರುವ ಮತ್ತೊಂದು ಹೊಸ ಸಿನಿಮಾ ಪ್ರಕಟವಾಗಿದೆ. ಸದ್ಯದ ಮಾಹಿತಿ ಪ್ರಕಾರ ಶಿವಣ್ಣನ 126ನೇ ಚಿತ್ರಕ್ಕೆ ರಿಷಭ್ ಶೆಟ್ಟಿ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಗ್ತಿದೆ. ಹೌದು.. ‘ಭಜರಂಗಿ-2’ ಚಿತ್ರ ನಿರ್ಮಾಣ ಮಾಡಿರುವುದು ಜಯಣ್ಣ-ಭೋಗೇಂದ್ರ. ಈ ನಿರ್ಮಾಪಕರ ಜೊತೆ ಮತ್ತೊಂದು ಸಿನಿಮಾ ಮಾಡಲು ಶಿವಣ್ಣ ನಿರ್ಧರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಸಿನಿಮಾದ ಕುರಿತು ಹೆಚ್ಚಿನ ಮಾಹಿತಿ ಹುಟ್ಟುಹಬ್ಬದ ದಿನ ಸಿಗುವ ಸಾಧ್ಯತೆ ಇದೆ.
ಸದ್ಯ ‘ಭಜರಂಗಿ-2’ ಬಿಡುಗಡೆಗೆ ಸಜ್ಜಾಗಿದೆ. ವಿಜಯ್ ಮಿಲ್ಟನ್ ಜೊತೆ ಹೊಸ ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿದೆ. ಈ ನಡುವೆ , 123 ,126ನೇ ಸಿನಿಮಾದ ಕುರಿತು ಹೊಸ ಸುದ್ದಿ ಹೊರಬಿದ್ದಿದೆ. ಹರ್ಷ ಜೊತೆ ಇನ್ನೊಂದು ಚಿತ್ರ ಹರ್ಷ ಜೊತೆ ನಟ ಶಿವರಾಜ್ ಕುಮಾರ್ ವೇದ ಸಿನಿಮಾ ಮಾಡಲಿದ್ದಾರೆ. ಇನ್ನೂ ನಾಳೆ ಶಿವಣನ್ನ ಬರ್ತ್ ಡೇ ಗೆ ಅವರ ನಟನೆಯ ಭಜರಂಗಿ 2 ಸಿನಿಮಾದ ಟೀಸರ್ ರಿಲೀಸ್ ಆಗಲಿದೆ.
BIGGBOSS 8: ಕಿಚ್ಚ ಸುದೀಪ್ ಬುದ್ದಿ ಮಾತು ಕೇಳಿ ಗಳಗಳನೆ ಅತ್ತ ದಿವ್ಯಾ ಉರುಡುಗ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬರ್ತ್ ಡೇಗೆ ಭಜರಂಗಿ 2 ಟೀಸರ್
‘ವಿಕ್ರಾಂತ್ ರೋಣ’ ಪೋಸ್ಟರ್ ಕಾಪಿ ಮಾಡಿದ್ರಾ ಬಾಲಿವುಡ್ ನ ‘ಭೂತ್ ಪೊಲೀಸ್’…?