Shivarajukumar : ಗಿಚ್ಚಿ ಗಿಲಿಗಿಲಿ ಸೀಸನ್ 2 ಗೆ ಚಾಲನೆ ಕೊಟ್ಟ ಹ್ಯಾಟ್ರಿಕ್ ಹೀರೋ….
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕಾಮಿಡಿ ಶೋ ‘ಗಿಚ್ಚಿ ಗಿಲಿಗಿಲಿ’ ಸೀಸನ್ 2 ಪ್ರೇಕ್ಷಕರನ್ನು ರಂಜಿಸಲು ಮತ್ತೆ ಬಂದಿದೆ. ನಾಳೆಯಿಂದ ಸಂಜೆ 7.30ಕ್ಕೆ ಶನಿವಾರ ಮತ್ತು ಭಾನುವಾರ ‘ಗಿಚ್ಚಿ ಗಿಲಿಗಿಲಿ’ ಸೀಸನ್ 2 ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
‘ಗಿಚ್ಚಿ ಗಿಲಿಗಿಲಿ’ ಮೊದಲ ಸೀಸನ್ ಅಪಾರ ಜನಪ್ರಿಯತೆ ಗಳಿಸಿಕೊಂಡಿತ್ತು. ಆ ಸಕ್ಸಸ್ ಬೆನ್ನಲ್ಲೇ ಸೀಸನ್ 2 ಆರಂಭವಾಗಿದೆ. ಈ ಬಾರಿಯ ವಿಶೇಷ ಅಂದ್ರೆ ಕಾಮಿಡಿ ರಥ ರಾಜ್ಯದ ಜನತೆಗೆ ಎರಡನೇ ಸೀಸನ್ ಗೆ ಆಹ್ವಾನ ನೀಡಲಿದೆ. ‘ಗಿಚ್ಚಿ ಗಿಲಿಗಿಲಿ’ ಸೀಸನ್ 2 ಕಾಮಿಡಿ ರಥ ರಾಜ್ಯದ ನಾನಾ ಜಿಲ್ಲೆಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಪ್ರಚಾರವನ್ನು ನಡೆಸಲಿದ್ದು, ಜನವರಿ 8ರಿಂದ ಹೊರಟ ಈ ಕಾಮಿಡಿ ರಥಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಾಲನೆ ನೀಡಿದ್ದಾರೆ. ‘ಗಿಚ್ಚಿ ಗಿಲಿಗಿಲಿ’ಯ ಮೊದಲ ಸೀಸನ್ ಹಲವು ಕಲಾವಿದರು ಕಾಮಿಡಿ ರಥದ ಮುಖಾಂತರ ರಾಜ್ಯಾದ್ಯಂತ ಸಂಚರಿಸಿ ವೀಕ್ಷಕರಿಗೆ ಕಾರ್ಯಕ್ರಮ ನೋಡಲು ಆಹ್ವಾನಿಸಲಿದ್ದಾರೆ.
ಸೀಸನ್ 2 ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ವೇದ’ ಸಿನಿಮಾ 25 ದಿನದ ಸಂಭ್ರಮದೊಂದಿಗೆ ಆರಂಭವಾಗಲಿದೆ. ಹಾಗಾಗಿ ಸೀಸನ್ 2 ಮೊದಲ ಸಂಚಿಕೆಯಲ್ಲಿ ಹ್ಯಾಟ್ರಿಕ್ ಹೀರೋ ಪಾಲ್ಗೊಂಡಿದ್ದು ಕಾರ್ಯಕ್ರಮದ ಎನರ್ಜಿಯನ್ನು ಹೆಚ್ಚಿಸಿ ಕಿಕ್ ಸ್ಟಾರ್ಟ್ ನೀಡಲಿದೆ.
ಕಾಮಿಡಿ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಶಿವರಾಜ್ ಕುಮಾರ್ ಕಾಮಿಡಿ ನನಗೆ ತುಂಬಾ ಇಷ್ಟ. ‘ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮ ಜನರನ್ನು ನಗಿಸುವ ಕೆಲಸವನ್ನು ತುಂಬಾ ಚೆನ್ನಾಗಿ ಮಾಡುತ್ತಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ರು. ಈ ಸಂದರ್ಭದಲ್ಲಿ ‘ಗಿಚ್ಚಿ ಗಿಲಿಗಿಲಿ’ ತೀರ್ಪುಗಾರರು ಕೂಡ ಹಾಜರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ರು.
ಕಾರ್ಯಕ್ರಮದ ನಿರ್ದೇಶಕ ಪ್ರಕಾಶ್ ಮಾತನಾಡಿ ರಾಮನಗರ, ಮಂಡ್ಯ, ಮೈಸೂರು, ಕೊಡಗಿನಿಂದ ಹಿಡಿದು ದಾವಣಗೆರೆ, ಹುಬ್ಬಳ್ಳಿ ತನಕ ಕಾಮಿಡಿ ರಥ ವೀಕ್ಷಕರಿಗೆ ಹಲವು ಸ್ಪರ್ಧೆ ಹಾಗೂ ಬಹುಮಾನಗಳನ್ನು ಹೊತ್ತು ತರಲಿದೆ. ಸೀಸನ್ 2ನಲ್ಲಿ ಮೊದಲ ಸೀಸನ್ ನಲ್ಲಿ ರಂಜಿಸಿದ್ದ ಕಲಾವಿದರೊಂದಿಗೆ ಹೊಸ ಕಲಾವಿದರು ಕೂಡ ಇರಲಿದ್ದಾರೆ ಎಂದು ತಿಳಿಸಿದ್ರು.
Shivarajukumar : The hat trick hero who kicked off Gitchy Gili Gili season 2….