ಶೂಟರ್ ನಮನ್ ವೀರ್ ಸಿಂಗ್ ಬ್ರಾರ್ ನಿಗೂಢ ಸಾವು

1 min read
namanveer-brar saaksha tv

ಶೂಟರ್ ನಮನ್ ವೀರ್ ಸಿಂಗ್ ಬ್ರಾರ್ ನಿಗೂಢ ಸಾವು

ಚಂಡೀಗಢ : ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದ ಶೂಟರ್ ನಮನ್ ವೀರ್ ಸಿಂಗ್ ಬ್ರಾರ್ ಅವರು ತಮ್ಮ ನಿವಾಸದಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ.

ಮೊಹಾಲಿಯ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದು, ನಮನ್‍ವೀರ್ ದೇಹದಲ್ಲಿ ಗುಂಡು ತಾಗಿದ ಗಾಯ ಇದೆ ಎಂದು ಅಲ್ಲಿನ ಉಪ ಪೊಲೀಸ್ ಆಯುಕ್ತ ಗುರುಶೇರ್ ಸಿಂಗ್ ಸಂಧು ತಿಳಿಸಿದ್ದಾರೆ.

ನಮನ್ ವೀರ್ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.

namanveer-brar saaksha tv

ಮರಣೋತ್ತರ ಪರೀಕ್ಷೆಯ ವರದಿ ಬಂದ ಮೇಲೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಇನ್ನು ನಮನ್ ವೀರ್ ಅವರು ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ವಿಶ್ವವಿದ್ಯಾಲಯಗಳ ವಿಶ್ವಮಟ್ಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd