ಅಪರಿಚಿತರು ಆಸ್ಪತ್ರೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ ಪರಿಣಾಮ ವೈದ್ಯರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆ ದೆಹಲಿಯ ನಿಮಾ ಆಸ್ಪತ್ರೆಯಲ್ಲಿ ನಡೆದಿದೆ.
ರೋಗಿಗಳ ನೆಪದಲ್ಲಿ ಬಂದಿದ್ದ ಇಬ್ಬರು ಕಾಲಿಗೆ ಗಾಯವಾಗಿದೆ ಎಂದಿದ್ದಾರೆ. ಆಗ ಒಳ ನುಗ್ಗಿ ವೈದ್ಯ ಜಾವೇದ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಯುವಕರು ಚಿಕಿತ್ಸೆ ಪಡೆದ ನಂತರ ವೈದ್ಯರನ್ನು ಭೇಟಿಯಾಗಲೇಬೇಕು ಎಂದು ಮನವಿ ಮಾಡಿದರು. ವೈದ್ಯರ ಕ್ಯಾಬಿನ್ಗೆ ಪ್ರವೇಶಿಸಿದಾಗ ವೈದ್ಯರನ್ನು ಹತ್ಯೆ ಮಾಡಿದ್ದಾರೆ. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.