ಮುಂಬಯಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ (Short Circuit) ಅಂಗಡಿಗೆ ಬೆಂಕಿ ತಗುಲಿದ ಪರಿಣಾಮ ಒಂದೇ ಕುಟುಂಬದ 7 ಜನರು ಸಜೀವವಾಗಿ ದಹನಗೊಂಡಿರುವ ಘಟನೆ ನಡೆದಿದೆ.
ಮುಂಬಯಿನ (Mumbai) ಸಿದ್ದಾರ್ಥ ಕಾಲೋನಿಯ ಕೆ.ಎನ್. ಗಾಯಕ್ವಾಡ್ ಮಾರ್ಗದಲ್ಲಿನ ಚೇಂಬೂರ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಒಂದೇ ಕುಟುಂಬದ 7 ಜನ ಸಾವನ್ನಪ್ಪಿದ್ದಾರೆ. ಈ ಪೈಕಿ ಮೂವರು ಮಕ್ಕಳಿದ್ದಾರೆ. ಪ್ರೆಸಿ ಗುಪ್ತಾ (6), ಮಂಜು ಗುಪ್ತಾ (30), ಅನಿತಾ ಧರಮದೇವ್ ಗುಪ್ತಾ (39), ಪ್ರೇಮ ಚೇಡಿರಾಮ್ ಗುಪ್ತಾ (30), ನರೇಂದ್ರ ಗುಪ್ತಾ (10), ವಿಧಿ ಚೇಡಿರಾಮ್ ಗುಪ್ತಾ (15), ಗೀತಾದೇವಿ ಧರಮ್ ದೇವ್ ಗುಪ್ತಾ (60) ಸಾವನ್ನಪ್ಪಿದ ದುರ್ದೈವಿಗಳು ಎನ್ನಲಾಗಿದೆ.
ಇಂದು ಬೆಳಗಿನ ಜಾವ ಈ ಘಟ ನಡೆದಿದೆ. ಸ್ಥಳಕ್ಕೆ ವಲಯ ಡಿಸಿಪಿ ಹೇಮರಾಜ್ ಸಿಂಗ್ ರಜಪೂತ್ (DCP Hemraj Singh Rajaput) ಭೇಟಿ ನೀಡಿ ಮಾತನಾಡಿದ್ದಾರೆ.
ಕಟ್ಟಡದ ಎರಡು ಮಹಡಿಯಲ್ಲಿ ವಾಸಿಸುತ್ತಿದ್ದ ಕುಟುಂಬದ 7 ಜನರು ಸಾವನ್ನಪ್ಪಿದ್ದು, ನೆಲಮಹಡಿಯಲ್ಲಿದ್ದ ಇಬ್ಬರು ಪಾರಾಗಿದ್ದಾರೆ. ಸದ್ಯ ನಮ್ಮ ತಂಡ ಹಾಗೂ ಅಗ್ನಿಶಾಮಕ ದಳವು (Fire Brigade) ತನಿಖೆ ನಡೆಸುತ್ತಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣ ಪತ್ತೆ ಹಚ್ಚಲಾಗಿದೆ ಎಂದಿದ್ದಾರೆ.