ವಿದ್ಯಾರ್ಥಿಗಳನ್ನು ಶಾಲೆಗಳತ್ತ ಸೆಳೆಯುವುದಕ್ಕಾಗಿ ಶಿಕ್ಷಕರು ಶ್ರಾವಣ ಸಿರಿ-ಸಿಹಿ ಭೋಜನ ಎಂಬ ವಿನೂತನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ.
ಶ್ರಾವಣ ಮಾಸದಾದ್ಯಂತ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿಹಿ ಪದಾರ್ಥ ನೀಡಲಾಗಿದೆ. ಶಾಲೆಯಲ್ಲಿ 1ನೇ ತರಗತಿಯಿಂದ 8ನೇ ತರಗತಿಯವರೆಗೂ 125 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಯೋಜನೆಯಿಂದ ಸಂತಸಗೊಂಡಿದ್ದಾರೆ. ಎಸ್ ಡಿಎಂಸಿ ಸದಸ್ಯರು, ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರದಿಂದ ವಿದ್ಯಾರ್ಥಿಗಳಿಗೆ ಬಿಸಿಯೂಟದ ಜೊತೆಗೆ ಪ್ರತಿ ದಿನ ಜಿಲೇಬಿ, ಬೂಂದಿ, ಮೈಸೂರು ಪಾಕ್, ಶಾವಿಗೆ ಪಾಯಸ, ಕೇಸರಿಬಾತ್, ಹೋಳಿಗೆ, ಗೋಧಇ ಹುಗ್ಗಿ ವಿತರಿಸಲಾಗಿದೆ. ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಿದ್ದು, ಮುಂದಿನ ದಿನಗಳಲ್ಲಿಯೂ ಯೋಜನೆ ಮುಂದುವರೆಸಿಕೊಂಡು ಹೋಗುವ ಯೋಜನೆ ಶಿಕ್ಷಕರದ್ದಾಗಿದೆ.