ಶ್ರೀಯಾ ಅಂಡರ್ ವಾಟರ್ ಫೋಟೋಗೆ ಅಭಿಮಾನಿಗಳು ಫಿದಾ..!

ಕಂದಸಾಮಿ, ಶಿವಾಜಿಯಂತಹ ಸೂಪರ್ ಹಿಟ್ ಸಿನೆಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿರುವ ದಕ್ಷಿಣ ಭಾರತದ ಸ್ಟಾರ್ ನಟಿಯರಲ್ಲಿ ಒಬ್ಬರು ಶ್ರೀಯಾ. ಎಂತಹದ್ದೇ ಲುಕ್ ಇರಲಿ, ಎಂತಹದ್ದೇ ಪಾತ್ರವಿರಲಿ, ಟ್ರೆಡಿಶನಲ್ ಆಗಲಿ ಮಾಡ್ರನ್ ಆಗಲಿ ಎಲ್ಲಾದಕ್ಕೂ ಅಚ್ಚುಕಟ್ಟಾಗಿ ಹೊಂದುಕೊಳ್ಳವ ನಟಿ ಶ್ರೀಯಾ ಅವರು ಬಾಲಿವುಡ್ ನಲ್ಲಿಯೂ ಚಿರಪರಿಚಿತರು. ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್ ಮಾಡಿಕೊಂಡು ಸುದ್ದಿಯಲ್ಲಿರುವ ಶ್ರೀಯಾ ಸರಣ್   ಇದೀಗ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋವೊಂದು ಭಾರೀ ಸದ್ದು ಮಾಡ್ತಿದೆ.
ಹೌದು ಅಂಡರ್ ವಾಟರ್ ನಲ್ಲಿ ಬಿಕನಿ ವೇರ್ ಮಾಡಿ ಪೋಟೋ ಶೂಟ್ ಮಾಡಿಸಿರುವ ಶ್ರೀಯಾ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಶ್ರೀಯಾ ಫೋಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲದೇ ” ಕೊರೊನಾ ಲಾಕ್ ಡೌನ್ ನಿಂದ ಮನೆಯಲ್ಲಿಯೇ ಇರುವಂತಾಗಿದೆ” ಎಂದು ಫೋಟೋಗೆ ಶ್ರೀಯಾ ಕೊಟ್ಟಿರುವ ಅಡಿಬರಹವು ಕೂಡ ನೆಟ್ಟಿಗರ ಗಮನ ಸೆಳೆದಿದೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This