ಮಗನೇ ತಂದೆಯನ್ನು ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ.
ಘಟನೆಯಿಂದಾಗಿ ಗೃಹ ಪ್ರವೇಶವಾಗಬೇಕಿದ್ದ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಗೃಹ ಪ್ರವೇಶಕ್ಕಾಗಿ ನೆಂಟರಿಷ್ಟರಿಗೆ ಅಹ್ವಾನ ಪತ್ರಿಕೆಯನ್ನೂ ಹಂಚಲಾಗಿತ್ತು. ಹದಿನೈದು ದಿನ ಕಳೆದರೆ ಹೊಸ ಮನೆಯ ಗೃಹ ಪ್ರವೇಶವಾಗಬೇಕಿತ್ತು. ಆದರೆ, ಕುಡಿದ ಅಮಲಿನಲ್ಲಿ ಘನಘೋರ ಘಟನೆಯೊಂದು ನಡೆದಿದೆ.
ತಂದೆ ರವಿ (45) ಮೇಲೆ ಪುತ್ರ ಸುದೀಪ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಬುಧವಾರ ತಾಯಿಯು ತಮ್ಮ ಸಹೋದರನ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಕಿರಿಯ ಮಗ ದುಡಿಯುವುದಕ್ಕಾಗಿ ಹೈದರಾಬಾದ್ ಗೆ ತೆರಳಿದ್ದ. ಇತ್ತ ಕುಡಿತದ ದಾಸನಾಗಿದ್ದ ತಂದೆ ರವಿ, ಕಂಠಪೂರ್ತಿ ಕುಡಿದು ರಾತ್ರಿ ವೇಳೆ ಮಗನೊಂದಿಗೆ ಜಗಳ ಆರಂಭಿಸಿದ್ದಾನೆ. ಅಕ್ಕಪಕ್ಕದವರು ಇವರ ಜಗಳ ಹೊಸದೇನು ಅಲ್ಲ ಎಂದು ಸುಮ್ಮನಾಗಿದ್ದಾರೆ. ಆದರೆ ಬೆಳಕಾಗುವಷ್ಟರಲ್ಲಿ ನಿತ್ರಾಣವಾಗಿ ಬಿದ್ದಿದ್ದ ರವಿಯನ್ನು ಕಂಡ ಗ್ರಾಮಸ್ಥರು ಆರೈಕೆ ಮಾಡಿ ನೀರು ಕುಡಿಸುವಷ್ಟರಲ್ಲಿ ಆತ ಪ್ರಾಣ ಬಿಟ್ಟಿದ್ದಾನೆ. ಇನ್ನೊಂದೆಡೆ ಮಗ ಹೊಡೆದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ರವಿ ಕುಡಿತದ ದಾಸನಾಗಿದ್ದ. ಮನೆಯ ಕೆಲಸವನ್ನು ನಿರ್ವಹಿಸುತ್ತಿರಲಿಲ್ಲ. ತಾಯಿಯೇ ಹೇಗೋ ಸಂಸಾರ ನಡೆಸುತ್ತಿದ್ದರು. ಇತ್ತೀಚೆಗೆ ಮಕ್ಕಳು ದುಡಿಯಲು ಆರಂಭಿಸಿದ್ದರು. ಹೈದ್ರಾಬಾದ್ ನಲ್ಲಿ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಕಿರಿಯ ಪುತ್ರ ಸಂದೀಪ್ ಹಣವನ್ನು ಒಟ್ಟುಗೂಡಿಸಿ ಹೊಸ ಮನೆ ಕಟ್ಟಿಸಿದ್ದ. ಫೆಬ್ರವರಿ 18ಕ್ಕೆ ಗೃಹ ಪ್ರವೇಶದ ದಿನಾಂಕ ಕೂಡ ಗೊತ್ತು ಮಾಡಲಾಗಿತ್ತು. ಸಂಬಂಧಿಕರಿಗೆ ಆಹ್ವಾನ ಕೂಡ ನೀಡಲಾಗಿತ್ತು. ಈ ವೇಳೆ ತಂದೆ ರವಿ ಹಾಗೂ ಮಗ ಸುದೀಪ್ ಮಧ್ಯೆ ಜಗಳ ಆರಂಭವಾಗಿದೆ. ತಂದೆಗೆ ಮನಬಂದಂತೆ ಹಲ್ಲೆ ನಡಸಿದ್ದ ಪುತ್ರ, ರವಿ ಪ್ರಜ್ಞೆ ಕಳೆದುಕೊಂಡು ಬೀಳುತ್ತಿದ್ದಂತೆ ಪರಾರಿಯಾಗಿದ್ದಾನೆ. ರಾತ್ರಿಯಿಡೀ ನರಳಾಡಿದ್ದಾನೆ. ಬೆಳಿಗ್ಗೆ ಗ್ರಾಮಸ್ಥರು ಬಂದು ನೋಡಿದಾಗ ಸಂಪೂರ್ಣವಾಗಿ ಅಸ್ವಸ್ಥನಾಗಿದ್ದಾನೆ. ನೀರು ಕುಡಿಸಿ ಆರೈಕೆ ಮಾಡುವಷ್ಟರಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.