ನಟಿ ಶೃತಿ ಹಾಸನ್ ಗೆ ಕೋವಿಡ್ – 19 ಪಾಸಿಟಿವ್ ಪತ್ತೆ…
ಕಾಲಿವುಡ್, ಟಾಲಿವುಡ್ ನಟಿ ಶ್ರುತಿ ಹಾಸನ್ ಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಸೌಮ್ಯ ಲಕ್ಷಣಗಳೊಂದಿಗೆ ಕೊರೊನಾವೈರಸ್ಗೆ ತುತ್ತಾಗಿರುವುದಾಗಿ Instagram ನಲ್ಲಿ ಬರೆದುಕೊಂಡಿದ್ದಾರೆ.
ಶ್ರುತಿ ಹಾಸನ್ ತಗೆ ಕೋವಿಡ್ ದೃಡಪಟ್ಟಿರುವ ಕುರಿತು Instagram ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಭಾನುವಾರ, ಫೆಬ್ರವರಿ 27 ರಂದು, ಕೋವಿಡ್ಗೆ ಪಾಸಿಟೀವ್ ಬಂದಿರುವ ಕುರಿತು “ಎಲ್ಲರಿಗೂ ನಮಸ್ಕಾರ! ಎಲ್ಲಾ ಸುರಕ್ಷತಾ ಕ್ರಮಗಳ ಹೊರತಾಗಿಯೂ ನನಗೆ ಕೋವಿಡ್ ಪಾಸಿಟೀವ್ ಕಂಡು ಬಂದಿದೆ. . ನಾನು ಸುಧಾರಿಸಿಕೊಳ್ಳುತ್ತಿದ್ದೇನೆ ಮತ್ತು ಶೀಘ್ರದಲ್ಲೆ ಹಿಂತಿರುಗಲು ಕಾಯಲು ಸಾಧ್ಯವಿಲ್ಲ! ಧನ್ಯವಾದಗಳು ಮತ್ತು ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುತ್ತೇನೆ. ಎಂದು ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.
https://www.instagram.com/p/CaeBeEeNUFx/?utm_source=ig_embed&ig_rid=d0b48dde-944b-4569-a841-51172d919264
ಶ್ರುತಿ ಹಾಸನ್ ಕೊನೆಯದಾಗಿ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾದ ವೆಬ್ ಸರಣಿ, ಬೆಸ್ಟ್ ಸೆಲ್ಲರ್ ನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಮಿಥುನ್ ಚಕ್ರವರ್ತಿ, ಶ್ರುತಿ ಹಾಸನ್, ಅರ್ಜನ್ ಬಾಜ್ವಾ, ಗೌಹರ್ ಖಾನ್, ಸತ್ಯಜೀತ್ ದುಬೆ ಮತ್ತು ಸೋನಾಲಿ ಕುಲಕರ್ಣಿ ಕೂಡ ನಟಿಸಿದ್ದಾರೆ. ಶ್ರುತಿ ಹಾಸನ್, ಪ್ರಭಾಸ್ ಜೊತೆ ಸಲಾರ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ ಮತ್ತು ಜಗಪತಿ ಬಾಪು ಕೂಡ ನಟಿಸಿದ್ದಾರೆ. ನಿರ್ದೇಶಕ ಗೋಪಿಚಂದ್ ಮಲಿನೇನಿ ಜೊತೆಯಲ್ಲಿ ನಂದಮೂರಿ ಬಾಲಕೃಷ್ಣ ಅವರ ಮುಂಬರುವ ಚಿತ್ರವನ್ನೂ ಶ್ರುತಿ ಹೊಂದಿದ್ದಾರೆ.