ಸಿದ್ದರಾಮಯ್ಯ ಒಬ್ಬ”ಹವಾಮಾನ ತಜ್ಞ” : ಬಿಜೆಪಿ ಹೀಗೆ ಟ್ವೀಟ್ ಮಾಡಿದ್ದೇಕೆ..?

1 min read
Congress padayatre saaksha tv

ಸಿದ್ದರಾಮಯ್ಯ ಒಬ್ಬ”ಹವಾಮಾನ ತಜ್ಞ” : ಬಿಜೆಪಿ ಹೀಗೆ ಟ್ವೀಟ್ ಮಾಡಿದ್ದೇಕೆ..?

ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಟ್ವೀಟ್ ಬಾಣ ಮುಂದುವರೆಸಿದೆ. ನಿನ್ನೆ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನರ ಮೇಲೆ ಗರಂಯಾದ ಬಗ್ಗೆ ಬಿಜೆಪಿ ಟ್ವಿಟ್ಟರ್ ನಲ್ಲಿ ಕಿಡಿಕಾರಿದೆ.

ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿದ ಬಿಜೆಪಿ, ಸಿದ್ದರಾಮಯ್ಯ ಅವರಿಗೆ ಮುಂದಿನ ಸೋಲಿನ ಭೀತಿಗಿಂತಲೂ, ಚಾಮುಂಡೇಶ್ವರಿಯಲ್ಲಿ ಅನುಭವಿಸಿದ ಹಿಂದಿನ ಸೋಲು ದುಸ್ವಪ್ನದಂತೆ ಕಾಡುತ್ತಿದೆ. ಸಿದ್ದರಾಮಯ್ಯನವರೇ, ಚಾಮುಂಡೇಶ್ವರಿ ಕ್ಷೇತ್ರದ ಮತದಾರರೆಲ್ಲರೂ ನಿಮ್ಮ ಸೋಲಿಗೆ ಕಾರಣ ಎಂದು ಏಕೆ ಭಾವಿಸುತ್ತೀರಿ? ಮತದಾರರನ್ನು ಏಕೆ ಇಷ್ಟೊಂದು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದ್ದೀರಿ?

Siddaramaiah saaksha tv

ಚಾಮುಂಡೇಶ್ವರಿ ಕ್ಷೇತ್ರದ ಜನತೆ #ಬುರುಡೆರಾಮಯ್ಯ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೇ ಸ್ಥಿತಿ ಭವಿಷ್ಯದಲ್ಲಿ ಬಾದಾಮಿ ಕ್ಷೇತ್ರದ ಜನರಿಗೆ ಬಂದರೂ ಆಶ್ಚರ್ಯವಿಲ್ಲ. ಸಿದ್ದರಾಮಯ್ಯ ಒಬ್ಬ”ಹವಾಮಾನ ತಜ್ಞ”. ಹೀಗಾಗಿ 2018 ರಲ್ಲಿ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರು. ಈ ಬಾರಿಯೂ ಸೋಲಿನ ವಾಸನೆ ಗ್ರಹಿಸಿ ಚಾಮರಾಜಪೇಟೆಯತ್ತ ಕಣ್ಣಿಟ್ಟಿದ್ದಾರೆ.

ಎಲ್ಲರನ್ನೂ ಖರೀದಿ ಮಾಡಿರುವಂತೆ ವರ್ತಿಸುವುದು ಸಿದ್ದರಾಮಯ್ಯ ಅವರ ಮೂಲಗುಣ. ಗೆದ್ದ ಮೇಲೆ ಕ್ಷೇತ್ರವನ್ನೇ ಮರೆತಿರುವ ಸಿದ್ದರಾಮಯ್ಯ ಅವರಿಗೆ ಬಾದಾಮಿ ಜನತೆಯೂ ಮುಂದೆ ನೆನಪಿರುವಂಥ ಪಾಠ ಕಲಿಸಲಿದ್ದಾರೆ ಎಂದು ವ್ಯಂಗ್ಯವಾಡಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd