ADVERTISEMENT
Sunday, December 7, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಹಾಲು ಕೆಟ್ಟರೂ ಕುರುಬರು ಕೆಡುವುದಿಲ್ಲ, ಕೊಟ್ಟ ಮಾತಿಗೆ ತಪ್ಪಬೇಡಿ: ಸಿದ್ದರಾಮಯ್ಯಗೆ ಪುಣ್ಯಕೋಟಿ ಕಥೆ ಹೇಳಿ ಚಾಟಿ ಬೀಸಿದ ಹಳ್ಳಿಹಕ್ಕಿ

Siddaramaiah lashes out at H Vishwanath after telling Punyakoti story

Shwetha by Shwetha
November 23, 2025
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಮೈಸೂರು: ಕುರುಬ ಸಮುದಾಯವು ಸತ್ಯ ಮತ್ತು ನಿಷ್ಠೆಗೆ ಹೆಸರಾದದ್ದು. ಪುಣ್ಯಕೋಟಿಯಂತಹ ಸತ್ಯಸಂಧ ಪರಂಪರೆ ನಮ್ಮದು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಮಾತಿಗೆ ತಪ್ಪುವ ಮೂಲಕ ಇಡೀ ಸಮುದಾಯದ ಹೆಸರಿಗೆ ಕಳಂಕ ತರುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆಯ ಗೊಂದಲ ಮತ್ತು ಸಿದ್ದರಾಮಯ್ಯ ಅವರ ನಡೆವಳಿಕೆಯ ಬಗ್ಗೆ ಹರಿಹಾಯ್ದರು. ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಲೇಬೇಕು ಎಂದು ಆಗ್ರಹಿಸಿರುತ್ತಾರೆ.

Related posts

ಎಷ್ಟು ವಾಚ್ ಬೇಕಾದ್ರೂ ಕಟ್ಟಿಕೊಳ್ಳುವಷ್ಟು ಶಕ್ತಿ ಇದೆ -ಡಿಕೆ ಶಿವಕುಮಾರ್

ಎಷ್ಟು ವಾಚ್ ಬೇಕಾದ್ರೂ ಕಟ್ಟಿಕೊಳ್ಳುವಷ್ಟು ಶಕ್ತಿ ಇದೆ -ಡಿಕೆ ಶಿವಕುಮಾರ್

December 7, 2025
ಅಮೆರಿಕಾ ಅಧ್ಯಕ್ಷ ಟ್ರಂಪ್‌ಗೆ ಫಿಫಾದ ಮೊದಲ ಶಾಂತಿ ಪ್ರಶಸ್ತಿ – ಕನಸು ನಿಜವಾದ ಕ್ಷಣ

ಅಮೆರಿಕಾ ಅಧ್ಯಕ್ಷ ಟ್ರಂಪ್‌ಗೆ ಫಿಫಾದ ಮೊದಲ ಶಾಂತಿ ಪ್ರಶಸ್ತಿ – ಕನಸು ನಿಜವಾದ ಕ್ಷಣ

December 7, 2025

ಪುಣ್ಯಕೋಟಿ ಕಥೆಯ ಉಲ್ಲೇಖ ಮತ್ತು ವಾಗ್ದಾಳಿ

ಧರಣಿ ಮಂಡಲ ಮಧ್ಯದೊಳಗೆ ಎಂಬ ಜನಪ್ರಿಯ ಜನಪದ ಕವಿತೆಯನ್ನು ಉಲ್ಲೇಖಿಸಿದ ವಿಶ್ವನಾಥ್, ಹಸಿವು ಎಂದು ಬಂದ ವ್ಯಾಘ್ರಕ್ಕೆ ಮಾತು ಕೊಟ್ಟು, ಆಡಿದ ಮಾತಿನಂತೆ ನಡೆದುಕೊಂಡ ಗೋವಿನ ಸಂಸ್ಕೃತಿ ನಮ್ಮದು. ನಾವು ಕುರುಬ ಸಮಾಜದವರು, ಹಾಲು ಕೆಟ್ಟರೂ ಕುರುಬ ಸಮುದಾಯ ಕೆಡುವುದಿಲ್ಲ. ಆದರೆ ಸಿದ್ದರಾಮಯ್ಯ ಅವರು ವಚನ ಭ್ರಷ್ಟರಾಗುವ ಮೂಲಕ ಕುರುಬ ಸಮಾಜದ ಹೆಸರನ್ನು ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರ ಹಂಚಿಕೆ ಒಪ್ಪಂದ ಮುರಿದರೆ ಕಾಂಗ್ರೆಸ್ ಧೂಳೀಪಟ

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಅವರ ಸಮ್ಮುಖದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಆಣೆ ಪ್ರಮಾಣ ಮಾಡಲಾಗಿತ್ತು. ಅಂದು ನಡೆದ ಮಾತುಕತೆಯ ಬಗ್ಗೆ ಅಲ್ಲಿ ಉಪಸ್ಥಿತರಿದ್ದ ಹಿರಿಯ ನಾಯಕರು ಮೌನ ಮುರಿಯಬೇಕು. ಒಂದು ವೇಳೆ ಒಪ್ಪಂದದಂತೆ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟವಾಗಲಿದೆ ಎಂದು ಹಳ್ಳಿಹಕ್ಕಿ ಭವಿಷ್ಯ ನುಡಿದರು.

ಜೆಡಿಎಸ್ ನಿಂದ ಬಂದವರಿಗೆ ಆಶ್ರಯ ನೀಡಿದ ಪಕ್ಷಕ್ಕೆ ದ್ರೋಹ?

ಜೆಡಿಎಸ್ ಪಕ್ಷದಿಂದ ಸಿದ್ದರಾಮಯ್ಯ ಅವರನ್ನು ಹೊರಹಾಕಿದಾಗ ಅವರಿಗೆ ರಾಜಕೀಯ ಮರುಜೀವ ಮತ್ತು ಆಶ್ರಯ ನೀಡಿದ್ದು ಕಾಂಗ್ರೆಸ್ ಪಕ್ಷ. ಆದರೆ ಈಗ ಸಿದ್ದರಾಮಯ್ಯ ಅವರು ಅದೇ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ ವಚನ ಭ್ರಷ್ಟರಾದವರು ಯಾರೂ ಇತಿಹಾಸದಲ್ಲಿ ಉಳಿದಿಲ್ಲ ಎಂಬ ಸತ್ಯವನ್ನು ಅವರು ಮರೆಯಬಾರದು ಎಂದು ಕಿಡಿಕಾರಿದರು.

ಅಭಿವೃದ್ಧಿ ಶೂನ್ಯ, ಸಾಲದ ಶೂಲ

ರಾಜ್ಯದಲ್ಲಿ ದಿನ ಬೆಳಗಾದರೆ ಕೇವಲ ಅಧಿಕಾರ ಹಂಚಿಕೆ ಮತ್ತು ಸಿಎಂ ಬದಲಾವಣೆಯ ಚರ್ಚೆಗಳೇ ನಡೆಯುತ್ತಿವೆ. ಇದರ ಪರಿಣಾಮವಾಗಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಠಿತಗೊಂಡಿವೆ. ಈ ಗೊಂದಲ ನಿವಾರಿಸಲು ಮಲ್ಲಿಕಾರ್ಜುನ ಖರ್ಗೆ ಅವರು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ವಿಶ್ವನಾಥ್ ಆಗ್ರಹಿಸಿದರು.

ಇದೇ ವೇಳೆ ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಟೀಕಿಸಿದ ಅವರು, ಪ್ರಧಾನಿ ಮೋದಿ ಅವರು 5 ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಬರೀ ಬೊಗಳೆ ಬಿಡುತ್ತಿದ್ದಾರೆ. ಅತಿಯಾದ ಸಾಲ ಮಾಡುವ ಮೂಲಕ ರಾಜ್ಯವನ್ನು ಸಾಲದ ಕೂಪಕ್ಕೆ ದೂಡಿದ್ದಾರೆ. ಹಣಕಾಸು ಸಚಿವರಾಗಿರುವ ಅವರಿಗೆ ಹಣದ ಮೌಲ್ಯವೇ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ರಾಜ್ಯ ಸರ್ಕಾರ ಮದ್ಯದ ಬೆಲೆಯನ್ನು ವಿಪರೀತವಾಗಿ ಏರಿಸಿದೆ. ದುಬಾರಿ ಮದ್ಯವನ್ನು ಕೊಳ್ಳಲಾಗದ ಯುವಕರು ಗಾಂಜಾದಂತಹ ಮಾದಕ ವಸ್ತುಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಯುವ ಸಮುದಾಯ ಹಾದಿ ತಪ್ಪುತ್ತಿದೆ ಎಂದು ವಿಶ್ವನಾಥ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.

ShareTweetSendShare
Join us on:

Related Posts

ಎಷ್ಟು ವಾಚ್ ಬೇಕಾದ್ರೂ ಕಟ್ಟಿಕೊಳ್ಳುವಷ್ಟು ಶಕ್ತಿ ಇದೆ -ಡಿಕೆ ಶಿವಕುಮಾರ್

ಎಷ್ಟು ವಾಚ್ ಬೇಕಾದ್ರೂ ಕಟ್ಟಿಕೊಳ್ಳುವಷ್ಟು ಶಕ್ತಿ ಇದೆ -ಡಿಕೆ ಶಿವಕುಮಾರ್

by Shwetha
December 7, 2025
0

ರಾಜ್ಯದ ರಾಜಕೀಯ ವಲಯದಲ್ಲಿ ಈಗ ಕೈಗಡಿಯಾರದ ವಿವಾದ ಭಾರೀ ಚರ್ಚೆಗೆ ಕಾರಣವಾಗಿದೆ. ಕಾರ್ಟಿಯರ್ ವಾಚ್ ವಿಷಯದಲ್ಲಿ ಕಾಂಗ್ರೆಸ್ ಮತ್ತು BJP ನಡುವೆ ಮಾತಿನ ಚಕಮಕಿ ತೀವ್ರಗೊಂಡಿದ್ದು, ಈ...

ಅಮೆರಿಕಾ ಅಧ್ಯಕ್ಷ ಟ್ರಂಪ್‌ಗೆ ಫಿಫಾದ ಮೊದಲ ಶಾಂತಿ ಪ್ರಶಸ್ತಿ – ಕನಸು ನಿಜವಾದ ಕ್ಷಣ

ಅಮೆರಿಕಾ ಅಧ್ಯಕ್ಷ ಟ್ರಂಪ್‌ಗೆ ಫಿಫಾದ ಮೊದಲ ಶಾಂತಿ ಪ್ರಶಸ್ತಿ – ಕನಸು ನಿಜವಾದ ಕ್ಷಣ

by Shwetha
December 7, 2025
0

ವಾಷಿಂಗ್ಟನ್ ಡಿ.ಸಿಯ ಪ್ರಸಿದ್ಧ ಕೆನಡಿ ಸೆಂಟರ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಗೆ ಚೊಚ್ಚಲ ಫಿಫಾ ಶಾಂತಿ ಪ್ರಶಸ್ತಿ (FIFA Peace Award)...

‘INDIA ಮೈತ್ರಿಕೂಟ ಈಗ ಲೈಫ್‌ ಸಪೋರ್ಟ್‌ನಲ್ಲಿದೆ’ — ಒಮರ್ ಅಬ್ದುಲ್ಲಾ  ಟೀಕೆ

‘INDIA ಮೈತ್ರಿಕೂಟ ಈಗ ಲೈಫ್‌ ಸಪೋರ್ಟ್‌ನಲ್ಲಿದೆ’ — ಒಮರ್ ಅಬ್ದುಲ್ಲಾ ಟೀಕೆ

by Shwetha
December 7, 2025
0

ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಅವರು INDIA ಮೈತ್ರಿಕೂಟದ ಪ್ರಸ್ತುತ ಸ್ಥಿತಿಯನ್ನು ಗಂಭೀರವಾಗಿ ಟೀಕಿಸಿದ್ದಾರೆ. HT ಲೀಡರ್‌ಶಿಪ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಮೈತ್ರಿಕೂಟದ ಒಳರಾಜಕೀಯ, ಪರಸ್ಪರ...

ವಿಮಾನ ಟಿಕೆಟ್ ದರಗಳಿಗೆ ಕೇಂದ್ರದಿಂದ ಗರಿಷ್ಠ ಮಿತಿ: ದುಬಾರಿ ದರಗಳ ಹೆಚ್ಚಳಕ್ಕೆ ಬ್ರೇಕ್!

ವಿಮಾನ ಟಿಕೆಟ್ ದರಗಳಿಗೆ ಕೇಂದ್ರದಿಂದ ಗರಿಷ್ಠ ಮಿತಿ: ದುಬಾರಿ ದರಗಳ ಹೆಚ್ಚಳಕ್ಕೆ ಬ್ರೇಕ್!

by Shwetha
December 7, 2025
0

IndiGo ಬಿಕ್ಕಟ್ಟಿನ ಪರಿಣಾಮವಾಗಿ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಆಕಸ್ಮಿಕವಾಗಿ ಟಿಕೆಟ್ ದರಗಳು ಆಕಾಶಕ್ಕೆ ಏರಿದ್ದವು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ತುರ್ತು ಕ್ರಮ...

ಆದಿಚುಂಚನಗಿರಿ ಶ್ರೀಗಳಿಗೆ ನೋವಾಗಿದ್ದರೆ ಬಹಿರಂಗ ಕ್ಷಮೆ ಯಾಚಿಸುವೆ: ವಿವಾದಾತ್ಮಕ ಹೇಳಿಕೆಗೆ ತೆರೆ ಎಳೆದ ಹೆಚ್ ಡಿ ಕುಮಾರಸ್ವಾಮಿ

ಆದಿಚುಂಚನಗಿರಿ ಶ್ರೀಗಳಿಗೆ ನೋವಾಗಿದ್ದರೆ ಬಹಿರಂಗ ಕ್ಷಮೆ ಯಾಚಿಸುವೆ: ವಿವಾದಾತ್ಮಕ ಹೇಳಿಕೆಗೆ ತೆರೆ ಎಳೆದ ಹೆಚ್ ಡಿ ಕುಮಾರಸ್ವಾಮಿ

by Shwetha
December 7, 2025
0

ಮಂಡ್ಯ: ಇತ್ತೀಚೆಗೆ ಧರ್ಮಗುರುಗಳು ಮತ್ತು ರಾಜಕೀಯದ ನಂಟಿನ ಕುರಿತು ನೀಡಿದ್ದ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಆದಿಚುಂಚನಗಿರಿ ಮಹಾಸಂಸ್ಥಾನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram