ಮೈಸೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹಿರಿಯ ಪುತ್ರ ದಿವಂಗತ ರಾಕೇಶ್ ಮಗ ಧವನ್ ಜೊತೆ ಚೆಸ್ ಆಡುತ್ತಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿದ್ದರಾಮಯ್ಯ ನವರು ಮೈಸೂರಿಗೆ ಹೋದಾಗಲೆಲ್ಲ ಬಿಡುವಿನ ಸಮಯದಲ್ಲಿ ಮೊಮ್ಮಗನ ಜೊತೆ ಚೆಸ್ ಆಡುತ್ತಾರೆ. ಅದರಂತೆ ಈಗ ಮೈಸೂರಿನಲ್ಲಿರುವ ಸಿದ್ದರಾಮಯ್ಯ, ತಮ್ಮ ನಿವಾಸದಲ್ಲಿ ಚೆಸ್ ಆಡಿ ಖುಷಿ ಪಟ್ಟಿದ್ದಾರೆ.
ಅಂದಹಾಗೆ ರಾಜಕೀಯದಲ್ಲಿ ಎದುರಾಳಿಗಳಿಗೆ ತಂತ್ರಗಳ ಮೂಲಕ ಚೆಳ್ಳೆ ಹಣ್ಣು ತಿನಿಸುವ ಸಿದ್ದರಾಮಯ್ಯ, ಚೆಸ್ ಆಡುವುದರಲ್ಲೂ ಎತ್ತಿದ ಕೈ. ಮೊಮ್ಮಗ ಸಹ ತಾತನ ಟ್ರಿಕ್ಸ್ ಗೆ ಪ್ರತಿತಂತ್ರ ತೋರಿಸಿದ್ದು, ಮೊಮ್ಮಗನ ಆಟಕ್ಕೆ ಸಿದ್ದರಾಮಯ್ಯ ಫಿದಾ ಆಗಿದ್ದಾರಂತೆ.