ತಲೆ ಮೇಲೆ ಸಿಲಿಂಡರ್ ಹೊತ್ತಿದ್ದ ಶೋಭಾ ಕರಂದ್ಲಾಜೆ ಈಗೆಲ್ಲಿದ್ದಾರೆ : ಸಿದ್ದರಾಮಯ್ಯ

1 min read
Siddaramaiah saaksha tv

ತಲೆ ಮೇಲೆ ಸಿಲಿಂಡರ್ ಹೊತ್ತಿದ್ದ ಶೋಭಾ ಕರಂದ್ಲಾಜೆ ಈಗೆಲ್ಲಿದ್ದಾರೆ : ಸಿದ್ದರಾಮಯ್ಯ

ಬೆಂಗಳೂರು : ಈ ಹಿಂದೆ ಗ್ಯಾಸ್ ಬೆಲೆಯೇರಿಕೆ ವಿರೋಧಿಸಿ ಸಿಲಿಂಡರ್ ಅನ್ನು ತಲೆ ಮೇಲೆ ಹೊತ್ತು ಪ್ರತಿಭಟಿಸುತ್ತಿದ್ದ ಸಂಸದೆ ಶೋಭಾ ಕರಂದ್ಲಾಜೆ ಈಗೆಲ್ಲಿದ್ದಾರೆ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ತೈಲ ಬೆಲೆ ಏರಿಕೆ ಖಂಡಿಸಿ ಇಂದು ರಾಜ್ಯ ಕಾಂಗ್ರೆಸ್ ವತಿಯಿಂದ ಎತ್ತಿನಗಾಡಿ ಚಲೋ ಚಳುವಳಿ ಹಮ್ಮಿಕೊಳ್ಳಲಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕೆ ಮಾಡಿದ್ದರು. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, 1973ರಲ್ಲಿ ಪೆಟ್ರೋಲ್ ಬೆಲೆಯೇರಿಕೆ ವಿರೋಧಿಸಿ ಬಿಜೆಪಿ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಅವರು ಎತ್ತಿನಗಾಡಿ ಮೇಲೆ ಸಂಸತ್ ಭವನಕ್ಕೆ ಬಂದಿದ್ದರು. ಅಂದು ಜನ ವಾಜಪೇಯಿ ಅವರಿಗೆ ನೀವು ಬೀದಿಗಿಳಿದು ಹೋರಾಟ ಮಾಡಿ ಎಂದಿದ್ದರಾ? ಎಂದು ಪ್ರಶ್ನಿಸಿದ್ದಾರೆ.

ಇನ್ನು ಮುಂದುವರೆದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಬೇರೆ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ನಮಗೆ ಮುಖ್ಯವಲ್ಲ, ನಮ್ಮ ರಾಜ್ಯದ ಜನರಿಗೆ ಅನುಕೂಲವಾಗಬೇಕು, ಹಾಗಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ರಾಜ್ಯ ಬಿಜೆಪಿ ಸರ್ಕಾರ ಕಡಿತ ಮಾಡಬೇಕು ಎಂದು ಆಗ್ರಹಿಸುತ್ತೇನೆ.

ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯು.ಪಿ.ಎ ಸರ್ಕಾರವಿದ್ದಾಗ ಗ್ಯಾಸ್ ಬೆಲೆ ರೂ.414 ಇತ್ತು, ಇಂದು ಗ್ಯಾಸ್ ಬೆಲೆ ರೂ.980 ಆಗಿದೆ. ಕೊರೊನಾದಿಂದ ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಬಡ, ಮಧ್ಯಮ ವರ್ಗದ ಜನರು ಹೇಗೆ ಬದುಕಬೇಕು?

Siddaramaiah saaksha tv

ಜನ ಬೀದಿಗಿಳಿಯದಿದ್ದರೂ ಜನರ ಪರವಾಗಿ ಕಾಂಗ್ರೆಸ್ ಪಕ್ಷ ಬೀದಿಗಳಿದು ಹೋರಾಟ ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಮ್ಮೆ ಸಾಮಾಜಿಕ ಜಾಲತಾಣದ ಕಡೆಗೆ ಕಣ್ಣು ಹಾಯಿಸಿದ್ರೆ ಜನರ ಆಕ್ರೋಶ ಎಷ್ಟಿದೆ ಎಂಬುದು ಗೊತ್ತಾಗುತ್ತೆ.

1973ರಲ್ಲಿ ಪೆಟ್ರೋಲ್ ಬೆಲೆಯೇರಿಕೆ ವಿರೋಧಿಸಿ ಬಿಜೆಪಿ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಅವರು ಎತ್ತಿನಗಾಡಿ ಮೇಲೆ ಸಂಸತ್ ಭವನಕ್ಕೆ ಬಂದಿದ್ದರು. ಅಂದು ಜನ ವಾಜಪೇಯಿ ಅವರಿಗೆ ನೀವು ಬೀದಿಗಿಳಿದು ಹೋರಾಟ ಮಾಡಿ ಎಂದಿದ್ದರಾ?

ಈ ಹಿಂದೆ ಗ್ಯಾಸ್ ಬೆಲೆಯೇರಿಕೆ ವಿರೋಧಿಸಿ ಸಿಲಿಂಡರ್ ಅನ್ನು ತಲೆ ಮೇಲೆ ಹೊತ್ತು ಪ್ರತಿಭಟಿಸುತ್ತಿದ್ದ ಸಂಸದೆ ಶೋಭಾ ಕರಂದ್ಲಾಜೆ ಈಗೆಲ್ಲಿದ್ದಾರೆ? ಜನರಿಗೆ ಆಗುತ್ತಿರುವ ಅನ್ಯಾಯ ನೋಡಿಯೂ ಮಾತನಾಡಲಾಗದಂತ ಹುದ್ದೆಯಲ್ಲಿ ಅವರಿದ್ದರೆ ಆ ಹುದ್ದೆಯಲ್ಲಿ ಮುಂದುವರೆಯುವುದಕ್ಕಿಂತ ರಾಜೀನಾಮೆ ನೀಡುವುದು ಉತ್ತಮ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd