ನೆಲ-ಜಲದ ವಿಚಾರವಾಗಿ ಸಿದ್ದರಾಮಯ್ಯ Siddaramaiah’s ಹೇಳಿದ್ದೆಲ್ಲಾ ಸುಳ್ಳು : ಬಿಜೆಪಿ
ಬೆಂಗಳೂರು : ನೆಲ – ಜಲದ ವಿಚಾರವಾಗಿಯೂ ಸಿದ್ದರಾಮಯ್ಯ ಇಷ್ಟು ವರ್ಷ ಹೇಳಿದ್ದೆಲ್ಲವೂ ಬರೇ ಸುಳ್ಳು ಎಂದು ರಾಜ್ಯ ಬಿಜೆಪಿ ಘಟಕ ಕುಟುಕಿದೆ.
ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ನೆಲ – ಜಲದ ವಿಚಾರವಾಗಿಯೂ ಸಿದ್ದರಾಮಯ್ಯ ಇಷ್ಟು ವರ್ಷ ಹೇಳಿದ್ದೆಲ್ಲವೂ ಬರೇ ಸುಳ್ಳು. ಕಾಂಗ್ರೆಸ್ ನಡಿಗೆ – ಕೃಷ್ಣೆಯ ಕಡೆಗೆ ಎಂದು 2013 ರಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಪಾದಯಾತ್ರೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಹೇಳಿದ ಸುಳ್ಳುಗಳನ್ನು ನೆನಪಿಸಬೇಕೇ? ಸುಳ್ಳಿನ ಸರಮಾಲೆ ರೂಪಿಸಿಯೇ ಇವರು ಅಧಿಕಾರಕ್ಕೆ ಬಂದಿದ್ದು.
ಸಿದ್ದರಾಮಯ್ಯನವರೇ, ಕಾಂಗ್ರೆಸ್ ನಡಿಗೆ – ಕೃಷ್ಣೆಯ ಕಡೆಗೆ ಪಾದಯಾತ್ರೆ ಸಂದರ್ಭದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ವಾರ್ಷಿಕ ಹತ್ತು ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂದು ಭಾಷಣ ಬಿಗಿದಿರಿ. ಅಂದರೆ ಐದು ವರ್ಷದಲ್ಲಿ ಐವತ್ತು ಸಾವಿರ ಕೋಟಿ! ಆದರೆ ನೀವು ಕೊಟ್ಟಿದ್ದೆಷ್ಟು ಸಿದ್ದರಾಮಯ್ಯನವರೇ?
2013 ರಲ್ಲಿ ಮುಖ್ಯಮಂತ್ರಿಯಾದಾಗ, ತಾನು ಕೃಷ್ಣಾ ನದಿಯ ತಟದಲ್ಲಿ ನಿಂತು ಆಡಿದ ಮಾತುಗಳನ್ನು #ಬುರುಡೆರಾಮಯ್ಯ ಸಂಪೂರ್ಣ ಮರೆತರು.
"ವರ್ಷಕ್ಕೆ ಅಲ್ಲಪ್ಪ, ಅದು ಐದು ವರ್ಷಕ್ಕೆ ಹತ್ತು ಸಾವಿರ ಕೋಟಿ "ಎಂದಿದ್ದು ಎಂದು ವಿಷಯಾಂತರ ಮಾಡಿದರು.
ದಾಖಲೆ ಮುಂದಿಟ್ಟಾಗ "ಮತಾಂತರ ಕಾಯ್ದೆ" ಸಂದರ್ಭದಲ್ಲಿ ಆದಂತೆ ಪೇಚಿಗೆ ಸಿಲುಕಿದ್ದು ಮರೆತು ಹೋಯ್ತೆ?
— BJP Karnataka (@BJP4Karnataka) December 28, 2021
ಕೃಷ್ಣಾ ಮೇಲ್ದಂಡೆಗೆ ವಾರ್ಷಿಕ ಹತ್ತು ಸಾವಿರ ಕೋಟಿ ಅನುದಾನ ಅಸಾಧ್ಯ ಎಂದು ಪತ್ರಿಕೆಗಳು ಅಂದೇ ಬರೆದಿದ್ದವು. ಆದರೆ ಕೂಡಲಸಂಗಮದ ಸತ್ಯತಾಣದಲ್ಲಿ ನಿಂತು ಭಾಷಣ ಮಾಡುವಾಗ ನೀವು ಮಾಧ್ಯಮಗಳನ್ನೇ ತರಾಟೆಗೆ ತೆಗೆದುಕೊಂಡಿರಿ. ಅನುದಾನ ನೀಡಲು ಸಾಧ್ಯವಿದೆ ಎಂದಿರಿ. ಆದರೆ ಅಧಿಕಾರಕ್ಕೆ ಬಂದಾಗ ಕೃಷ್ಣೆಯನ್ನು ಮರೆತಿರಿ.
2013 ರಲ್ಲಿ ಮುಖ್ಯಮಂತ್ರಿಯಾದಾಗ, ತಾನು ಕೃಷ್ಣಾ ನದಿಯ ತಟದಲ್ಲಿ ನಿಂತು ಆಡಿದ ಮಾತುಗಳನ್ನು #ಬುರುಡೆರಾಮಯ್ಯ ಸಂಪೂರ್ಣ ಮರೆತರು. “ವರ್ಷಕ್ಕೆ ಅಲ್ಲಪ್ಪ, ಅದು ಐದು ವರ್ಷಕ್ಕೆ ಹತ್ತು ಸಾವಿರ ಕೋಟಿ “ಎಂದಿದ್ದು ಎಂದು ವಿಷಯಾಂತರ ಮಾಡಿದರು. ದಾಖಲೆ ಮುಂದಿಟ್ಟಾಗ “ಮತಾಂತರ ಕಾಯ್ದೆ” ಸಂದರ್ಭದಲ್ಲಿ ಆದಂತೆ ಪೇಚಿಗೆ ಸಿಲುಕಿದ್ದು ಮರೆತು ಹೋಯ್ತೆ?
ಸಿದ್ದರಾಮಯ್ಯನವರೇ,
ಕಾಂಗ್ರೆಸ್ ನಡಿಗೆ – ಕೃಷ್ಣೆಯ ಕಡೆಗೆ ಪಾದಯಾತ್ರೆ ಸಂದರ್ಭದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ವಾರ್ಷಿಕ ಹತ್ತು ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂದು ಭಾಷಣ ಬಿಗಿದಿರಿ.
ಅಂದರೆ ಐದು ವರ್ಷದಲ್ಲಿ ಐವತ್ತು ಸಾವಿರ ಕೋಟಿ! ಆದರೆ ನೀವು ಕೊಟ್ಟಿದ್ದೆಷ್ಟು ಸಿದ್ದರಾಮಯ್ಯನವರೇ? #ಬುರುಡೆರಾಮಯ್ಯ
— BJP Karnataka (@BJP4Karnataka) December 28, 2021
ಈಗ ಮೇಕೆದಾಟು ವಿಚಾರದಲ್ಲಿ ಸಿದ್ದರಾಮಯ್ಯ ಅವರು ಸುಳ್ಳಿನ ರಾಜಕಾರಣ ಆರಂಭಿಸಿದ್ದಾರೆ. ಮೇಕೆದಾಟು ನಮ್ಮ ಹಕ್ಕು ಎಂದು ರಾಜ್ಯ ಸರ್ಕಾರ ಹಲವು ಬಾರಿ ಪ್ರತಿಪಾದಿಸಿದ್ದರೂ ಕಾಂಗ್ರೆಸ್ ಪಕ್ಷದ ನಾಯಕರು ಸುಳ್ಳಿನ ಮೆರವಣಿಗೆ ಹೊರಟಿದ್ದಾರೆ. ಎಷ್ಟೆಂದರೂ ಸುಳ್ಳೇ ನಿಮ್ಮ ಮನೆ ದೇವರಲ್ಲವೇ ಎಂದು ಟೀಕೆ ಮಾಡಿದೆ.