ಸಚಿವ ಬಿ ಶ್ರೀರಾಮುಲು ಮನೆಗೆ ಕಾರು ಚಾಲಕರ ಮುತ್ತಿಗೆ Saaksha tv
ಬೆಂಗಳೂರು: ಸಾರಿಗೆ ಇಲಾಖೆ ಸಚಿವ ಬಿ ಶ್ರೀರಾಮುಲು ಮನೆಗೆ ಇಂದು ಕಾರು ಚಾಲಕರು ಮುತ್ತಿಗೆ ಹಾಕಿದ್ದಾರೆ.
ಬೆಂಗಳೂರುನಲ್ಲಿರುವ ಸೆವೆನ್ ಮಿನಿಸ್ಟರ್ ಕ್ವಾರ್ಟಸ್ನಲ್ಲಿರುವ ಸಚಿವ ಶ್ರೀರಾಮುಲು ಅವರ ಮನೆಗೆ ಭಾರತ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಮುತ್ತಿಗೆ ಹಾಕಿದೆ. ಅಲ್ಲದೆ ಸಚಿವ ಶ್ರೀರಾಮುಲು ಮನೆ ಮುಂದೆ ನೂರಾರು ಕಾರು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ. ಮನೆ ಮುಂದೆ ಧರಣಿ ನಡೆಸಿ, ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಕೂಡಲೇ ಬಂದ್ ಮಾಡಬೇಕು. ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸ್ಕೀಮ್ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ. ಬೇಡಿಕೆ ಈಡೇರುವವರೆಗೆ ಸ್ಥಳದಿಂದ ಕದಲುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.
ಇನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಶ್ರೀರಾಮುಲು ಅವರು ರ್ಯಾಪಿಡ್ ಬೈಕ್, ಟ್ಯಾಕ್ಸಿ ನಮ್ಮ ಗಮನಕ್ಕೆ ಬಂದಿದೆ. ಚಾಲಕರು ಅನ್ಯಾಯವಾಗುತ್ತಿದೆ ಎಂದು ಗಮನಕ್ಕೆ ತಂದಿದ್ದಾರೆ. ಸೋಮವಾರ ಎಲ್ಲಾ ಅಧ್ಯಕ್ಷರು, ಕಾನೂನು ಸಲಹೆಗಾರರನ್ನ ಕರೆದು ಮಾತನಾಡುತ್ತೇನೆ. ಎಲೆಕ್ಟ್ರಿಕ್ ಬೈಕ್ ಬಗ್ಗೆ ಮಾತನಾಡುತ್ತೇನೆ. ಯಾವ ಚಾಲಕರಿಗೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇದನ್ನೆ ನಂಬಿ ಜೀವನ ಮಾಡುತ್ತಿರುವ ಚಾಲಕರ ಸಮಸ್ಯೆ ಬಗೆಹರಿಸುತ್ತೇನೆ. ನಿರುದ್ಯೋಗಿಗಳು ಎನೋ ಒಂದು ಲಾಭ ಬರುತ್ತೆ ಅಂತಾ ಕೆಲಸ ಮಾಡುತ್ತಾರೆ. ಆದರೆ ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತೇವೆ ಅಂತ ತಿಳಿಸಿದರು. ಅಲ್ಲದೇ ಕಾನೂನುಬಾಹಿರವಾಗಿ ಸಂಚಾರಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ರ್ಯಾಪಿಡೋ ಬೈಕ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ನಾನು ಬಂದ ನಂತರ ಅನೇಕ ಕೆಲಸವನ್ನ ಮಾಡಿದ್ದೇನೆ. ಅದೇ ರೀತಿ ಈಗ ಕ್ರಮ ಕೈಗೊಳ್ಳುತ್ತೇವೆ. ಸೋಮವಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ವೈಟ್ ಬೋರ್ಡ್ ನಿಂದ ಅನಾಹುತವಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಒಂದು ವಾರ ಸಮಯವಕಾಶ ಕೊಡಿ ಇದರ ಬಗ್ಗೆ ಚರ್ಚೆ ಮಾಡಿ ರದ್ದು ಮಾಡುವ ಕೆಲಸ ಮಾಡಿಕೊಡುತ್ತೇನೆ ಎಂದು ಹೇಳಿದರು.