ಅಮೃತ ವರ್ಷಿಣಿ ಚಿತ್ರಕ್ಕೆ ಸಿಲ್ವರ್ ಜುಬಿಲಿ ಸಂಭ್ರಮ …
ಅಮೃತ ವರ್ಷಿಣಿ ಅಂದೆರೆ ಸಾಕು ಥಟ್ಟನೆ ನೆನಪಾಗುವ ಸಿನಿಮಾ ರಮೇಶ್ ಅರವಿಂದ್ , ಸುಹಾಸಿನಿ ಅಭಿನಯದ ಕನ್ನಡ ಸಿನಿಮಾ. ತುಂತುರು ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು ಈ ಸುಂದರ ಬೆಳದಿಂಗಳ ತರಹದ ಸೂಪರ್ ಹಿಟ್ ಹಾಡುಗಳನ್ನ ಕನ್ನಡಕ್ಕೆ ಉಡುಗೊರೆಯಾಗಿ ಕೊಟ್ಟ ಸಿನಿಮಾ ಅಮೃತ ವರ್ಷಿಣಿ .
ದಿನೇಶ್ ಬಾಬು ನಿರ್ದೇಶನದಲ್ಲಿ 1997 ರಲ್ಲಿ ಮೂಡಿಬಂದ ಚಿತ್ರ ಕನ್ನಡ ಸಿನಿ ಪ್ರಿಯರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಇಂಥಹ ಅದ್ಭುತ ಚಿತ್ರಕ್ಕೀಗ 25 ವರ್ಷ ತುಂಬಿದೆ. ಈ ಸಂತಸದ ವಿಷಯವನ್ನ ರಮೇಶ್ ಅರವಿಂದ್ ಫೇಸ್ ಬುಕ್ ಮತ್ತು ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಮೃತವರ್ಷಿಣಿ ಗೆ ಇಂದು 25 ವರ್ಷ !-ಜಯಶ್ರೀದೇವಿ, ದಿನೇಶ್‌ಬಾಬು, ಸುಹಾಸಿನಿ, ಶರತ್‌ಬಾಬು, ನಿವೇದಿತಾ, ದೇವಾ, ಕಲ್ಯಾಣ್, ಚಿತ್ರಾ ಮತ್ತು ನಮ್ಮ ಪ್ರೀತಿಯ ಎಸ್‌ಪಿಬಿ ಸರ್ ಅವರಿಗೆ ನಾನು ಋಣಿ. And a big thanks to You-each&everyone of you for uninterrupted love all these years to me ಎಂದು ಟ್ವೀಟ್ ಮಾಡಿದ್ದಾರೆ.
ರಮೇಶ್ ಅರವಿಂದ್ ಅವರ ವೃತ್ತಿ ಬದುಕಿಗೆ ಅದ್ಬುತ ತಿರುವ ನೀಡಿದ ಚಿತ್ರ 25 ವಸಂತಗಳನ್ನ ಮುಗಿದಿದೆ. ಈ ಚಿತ್ರ ರಾಜ್ಯಪ್ರಶಸ್ತಿ ಫಿಲ್ಮ ಫೇರ್ ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಹಾಗು ಮಲಯಾಳಂ ಭಾಷೆಗೆ ಡಬ್ ಆಗಿದ್ದ ಸಿನಿಮಾ ಬೇರೆ ಭಾಷೆಗಳಲ್ಲೂ ಬ್ಲಾಕ್ ಬ್ಲಾಸ್ಟರ್ ಆಗಿತ್ತು. ರಮೇಶ್ ಅರವಿಂದ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಸುಹಾಸಿನಿ ಚಿತ್ರದ ನಾಯಕಿಯಾಗಿ ದೊಡ್ಡ ಯಶಸ್ಸಿಗೆ ಕಾರಣವಾಗಿದ್ದರು.