Singapore Open Badminton – ಫೈನಲ್ ಗೆ ಲಗ್ಗೆ ಇಟ್ಟ ಪಿ ವಿ ಸಿಂಧು…
ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು ಸಿಂಗಾಪುರ ಓಪನ್ ಸೂಪರ್ 500 ಟೂರ್ನಿಯಲ್ಲಿ ಸೆಮುಪೈನಲ್ ಗೆದ್ದು ಫೈನಲ್ ಪ್ರವೇಶಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಜಪಾನ್‌ನ ಸಿನಾ ಕವಾಕಮಿ ಅವರನ್ನು 21-15, 21-7 ರಿಂದ ಸೋಲಿಸಿ ಗೆದ್ದು ಬೀಗಿದ್ದಾರೆ. ಇದಕ್ಕೂ ಮುನ್ನ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಅವರು ಚೀನಾದ ಆಟಗಾರ ಹಾನ್ ಯುವೇಯ್ ಅವರನ್ನು 17-21, 21-11, 21-19 ಸೆಟ್‌ಗಳಿಂದ ಸೋಲಿಸಿದ್ದರು.
Happy!!!@Pvsindhu1 into the #SingaporeOpenSuper500 Finals 🤩💙🇮🇳!!
Waiting for Tomorrow's Final⌛#pvsindhu#SingaporeOpen
Winning moment 💪🔎🤩 pic.twitter.com/0WPu2p2WS9
— Kamalesh joy (@kamaleshjoy) July 16, 2022
ಫೈನಲ್‌ನಲ್ಲಿ ಸಿಂಧು ಜಪಾನ್‌ನ ಅಯಾ ಒಹೊರಿ ಅಥವಾ ಚೀನಾದ ಜಿ ಯಿ ವಾಂಗ್ ಅವರನ್ನು ಎದುರಿಸಲಿದ್ದಾರೆ. ಜಪಾನ್‌ನ ಅಯಾ ಒಹೊರಿ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ತಾರೆ ಸೈನಾ ನೆಹ್ವಾಲ್ ಅವರನ್ನು ಸೋಲಿಸಿದರು. ಪ್ರಶಸ್ತಿ ಪಂದ್ಯದಲ್ಲಿ ಸಿಂಧು ಅವರನ್ನು ಎದುರಿಸಲು ಓಹೊರಿ ಈಗ ಜಿ ಯಿ ವಾಂಗ್ ಅವರನ್ನು ಸೋಲಿಸಬೇಕಾಗಿದೆ.
ಸಿಂಧು 4 ತಿಂಗಳ ಬಳಿಕ ಟೂರ್ನಿಯೊಂದರಲ್ಲಿ ಫೈನಲ್ ತಲುಪಿದ್ದಾರೆ. ಇದಕ್ಕೂ ಮುನ್ನ ಈ ವರ್ಷದ ಮಾರ್ಚ್‌ನಲ್ಲಿ ಸ್ವಿಸ್ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಪಂದ್ಯಾವಳಿಯ ಫೈನಲ್‌ನಲ್ಲಿ ಅವರು ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ಅವರನ್ನು 21-16, 21-8 ರಿಂದ ಸೋಲಿಸಿದ್ದರು.