ಬಳ್ಳಾರಿ ಉತ್ಸವದಲ್ಲಿ ಗಾಯಕಿ ಮಂಗ್ಲಿ ಕಾರಿಗೆ ಕಲ್ಲು ತೂರಾಟ ನಡೆಸಿದ ಪುಂಡರು…
ಬಳ್ಳಾರಿ ಉತ್ಸವದಲ್ಲಿ ಹಾಡಲು ಬಂದಿದ್ದ ತೆಲುಗು ಮೂಲದ ಕನ್ನಡದಲ್ಲೂ ಖ್ಯಾತಿ ಗಳಿಸುತ್ತಿರುವ ಗಾಯಕಿ ಮಂಗ್ಲಿ ಕಾರಿನ ಮೇಲೆ ಬಳ್ಳಾರಿಯಲ್ಲಿ ಕಳೆದ ರಾತ್ರಿ ಕಲ್ಲು ತೂರಟ ನಡೆದಿದೆ.
ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆದ ಉತ್ಸವದ ಕಾರ್ಯಕ್ರಮ ಮಗಿಸಿ ವೇದಿಕೆ ಹಿಂಬಾಗಕ್ಕೆ ಹೋಗಿದ್ದ ಮಂಗ್ಲಿ ಅವರನ್ನ ನೋಡಲು ಜನ ಮುಗಿಬಿದ್ದಿದ್ದರು. ವಿಶೇಷವಾಗಿ ಯುವಕ ಗುಂಪು ಮಂಗ್ಲಿ ಮಂಗ್ಲಿ ಕಾಣಲು ಮುಗಿಬಿದ್ದಿದ್ದಲ್ಲದೆ ಮೇಕಪ್ ಟೆಂಟ್ ಒಳಗೂ ಮುಗಿಬಿದ್ದಿದ್ದರು, ಕೂಡಲೇ ಪೊಲೀಸರು ಧಾವಿಸಿ ಲಘು ಲಾಟಿ ಪ್ರಹಾರ ಮಾಡಿದ್ದಾರೆ.
ಕೊನೆಗೆ ಮಂಗ್ಲಿಯವರು ತಮ್ಮ ಕಾರಿಗೆ ಹತ್ತಿ ಅಲ್ಲಿಂದ ಹೊರಟು ಹೋಗುವಾಗ ಪುಂಡರು ಅವರ ಕಾರಿಗೆ ಕಲ್ಲೆಸೆದಿದ್ದಾರೆ. ಕಲ್ಲು ಎಸೆದ ರಭಸಕ್ಕೆ ಕಾರಿನ ಗ್ಲಾಸುಗಳು ಪುಡಿಯಾಗಿವೆ.
ಇತ್ತೀಚೆಗೆ ಮಂಗ್ಲಿ ಚಿಕ್ಕಬಳ್ಳಾಪುರ ಉತ್ಸವಕ್ಕೆ ಹಾಡಲು ಬಂದಿದ್ದರು. ಆಗ ಮಂಗ್ಲಿಯವರನ್ನು ನಿರೂಪಕಿ ಅನುಶ್ರೀ ಕನ್ನಡದಲ್ಲಿ ನಾಲ್ಕು ಸಾಲು ಮಾತನಾಡಿ ಎಂದು ಕೇಳಿದ್ದಕ್ಕೆ ಕನ್ನಡದಲ್ಲಿ ಯಾಕೆ ಮಾತನಾಡಬೇಕು, ಚಿಕ್ಕಬಳ್ಳಾಪುರ ಜನತೆಗೆ ತೆಲುಗು ಅರ್ಥವಾಗುತ್ತದೆ, ನಾನು ತೆಲುಗಿನಲ್ಲಿಯೇ ಹಾಡುತ್ತೇನೆ, ಮಾತನಾಡುತ್ತೇನೆ ಎಂದಿದ್ದರು. ಅದು ಹಲವು ಕನ್ನಡಿಗರಿಗೆ ಇಷ್ಟವಾಗಿರಲಿಲ್ಲ.
Singer Mangli: Thugs pelted stones at singer Mangli’s car at Bellary Utsav…








