ಬೆಳಗಾವಿ: ಒಂದೇ ಭಾರತ್ ರೈಲು ಭಾಗ್ಯ ಇನ್ನು ಮುಂದೆ ಬೆಳಗಾವಿ ಜನರಿಗೂ ತಲುಪಲಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು (Vande Bharat Express Train) ಬೆಂಗಳೂರು- ಧಾರವಾಡದಿಂದ (Bengaluru -Dharwad) ಬೆಳಗಾವಿಗೆ (Belagavi) ವಿಸ್ತರಿಸಲಾಗಿದೆ. ಈ ಕುರಿತು ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ.
ಈ ರೈಲು ಪ್ರತಿ ದಿನ ಬೆಳಗ್ಗೆ 5:45ಕ್ಕೆ ಬೆಂಗಳೂರು ನಿಲ್ದಾಣದಿಂದ ಹೊರಟು ಮಧ್ಯಾಹ್ನ 1.30ಕ್ಕೆ ಬೆಳಗಾವಿಗೆ ಬರಲಿದೆ. ಅಲ್ಲಿಂದ ಮಧ್ಯಾಹ್ನ 2ಕ್ಕೆ ಹೊರಡುವ ರೈಲು ರಾತ್ರಿ 10ಕ್ಕೆ ಬೆಂಗಳೂರು ನಿಲ್ದಾಣ ತಲುಪಲಿದೆ.