ಮಂಗಳೂರು ವಿಮಾನ ನಿಲ್ದಾಣ – ಮಂಗಳವಾರ ಒಂದೇ ವಿಮಾನದ ಕಾರ್ಯಾಚರಣೆ

1 min read

ಮಂಗಳೂರು ವಿಮಾನ ನಿಲ್ದಾಣ – ಮಂಗಳವಾರ ಒಂದೇ ವಿಮಾನದ ಕಾರ್ಯಾಚರಣೆ

ವಿಮಾನ ಕಾರ್ಯಾಚರಣೆಯ ಮೇಲೆ ಲಾಕ್‌ಡೌನ್ ಗಂಭೀರ ಪರಿಣಾಮ ಬೀರಿದೆ. ಜೂನ್ 1 ಮಂಗಳವಾರದಂದು ಮಂಗಳೂರು ವಿಮಾನ ನಿಲ್ದಾಣವು ಒಂದೇ ಪ್ರಯಾಣಿಕ ವಿಮಾನದ ಕಾರ್ಯಾಚರಣೆಗೆ ಸಾಕ್ಷಿಯಾಗಿದೆ.

ಸಾಮಾನ್ಯವಾಗಿ, ಅಂತರರಾಷ್ಟ್ರೀಯ ವಿಮಾನಯಾನಗಳು ಸೇರಿದಂತೆ ಸುಮಾರು 22 ವಿಮಾನಗಳು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಚರಣೆ ನಡೆಸುತ್ತದೆ. ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಕನಿಷ್ಠ ಐದರಿಂದ ಆರು ವಿಮಾನಗಳು ಕಾರ್ಯಚರಣೆ ನಡೆಸುತ್ತಿದ್ದವು. ಆದರೆ ಮಂಗಳವಾರ ಮುಂಬೈಗೆ ತೆರಳಿದ ಒಂದೇ ಒಂದು ವಿಮಾನ ಹಾರಾಟ ನಡೆಸಿತು. ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿಮಾನಯಾನ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ನಾಗರಿಕ ವಿಮಾನಯಾನ ಸಚಿವಾಲಯವು ಜೂನ್ 1 ರಿಂದ ಕೇವಲ 50 ಪ್ರತಿಶತದಷ್ಟು ವಿಮಾನಗಳು ಮಾತ್ರ ಕಾರ್ಯನಿರ್ವಹಿಸುವಂತೆ ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಗೆ ನಿರ್ದೇಶನ ನೀಡಿತ್ತು.
ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಲು ಇನ್ನೊಂದು ಕಾರಣವೆಂದರೆ, ವಿಮಾನ ನಿಲ್ದಾಣಗಳಿಗೆ ಕಾಲಿಡುವ ಮೊದಲು ಪ್ರಯಾಣಿಕರು ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿಗಳನ್ನು ಹೊಂದಿರುವುದು ಕಡ್ಡಾಯಗೊಳಿಸಿದೆ. ಅನೇಕ ಪ್ರಯಾಣಿಕರು ಸಾಮಾನ್ಯವಾಗಿ ವ್ಯವಹಾರಕ್ಕಾಗಿ ಪ್ರಯಾಣಿಸುತ್ತಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ವ್ಯವಹಾರವು ಸ್ತಬ್ಧಗೊಂಡಿರುವ ಹಿನ್ನೆಲೆಯಲ್ಲಿ, ಪ್ರಯಾಣಿಕರ ಸಂಖ್ಯೆಯು ಕುಸಿದಿದೆ. ಈಗ ಸುಮಾರು ಒಂದು ವಾರದಿಂದ, ಇಲ್ಲಿಂದ ವಿವಿಧ ಸ್ಥಳಗಳಿಗೆ ಎರಡು ಮೂರು ವಿಮಾನಗಳು ಹಾರಾಟ ನಡೆಸುತ್ತಿದೆ. ಆದರೆ ಮಂಗಳವಾರ, ಕೇವಲ ಒಂದು ವಿಮಾನವನ್ನು ಮಾತ್ರ ಹಾರಾಟ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

ಆನ್‌ಲೈನ್ ಬುಕಿಂಗ್ ಮಾಹಿತಿಯ ಪ್ರಕಾರ ಬೆಂಗಳೂರು, ಮುಂಬೈ, ದೆಹಲಿ ಮತ್ತು ಇತರ ನಗರಗಳಿಗೆ ವಿಮಾನಗಳ ಆಸನಗಳನ್ನು ಇಲ್ಲಿಂದ ಕಾಯ್ದಿರಿಸಬಹುದು. ಆದರೆ ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ಇಲ್ಲದಿರುವ ಹಿನ್ನೆಲೆಯಲ್ಲಿ ವಿಮಾನಗಳು ಕೊನೆಯ ಗಳಿಗೆಯಲ್ಲಿ ರದ್ದಾಗುವ ಸಾಧ್ಯತೆಗಳು ಹೆಚ್ಚು. ಕೋವಿಡ್ 19 ಪ್ರಕರಣಗಳು ಈಗ ಕ್ರಮೇಣ ಕಡಿಮೆಯಾಗುತ್ತಿರುವುದರಿಂದ ಒಂದು ವಾರದ ನಂತರ ವಿಮಾನ ಹಾರಾಟ ಪ್ರಾರಂಭವಾಗಬಹುದು ಎಂಬ ಭರವಸೆ ಇದೆ.
wearing masks

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌ಸಾಕ್ಷಾಟಿವಿ ಕಳಕಳಿ.

#Mangaluru #Airport

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd