ವಿವಾಹಿತ ವ್ಯಕ್ತಿಯೊಬ್ಬಾತ ಬೇರೆಯವಳೊಂದಿಗೆ ಸಂಬಂಧವಿಟ್ಟುಕೊಂಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಪತ್ನಿಯನ್ನು ಥಳಿಸಿ ಆಕೆಗೆ ಫಿನಾಯಿಲ್ ಕುಡಿಸಿರುವ ಘಟನೆ ನಡೆದಿದೆ.
ತಾಯಿಯನ್ನು ಥಳಿಸುತ್ತಿರುವುದನ್ನು ಕಂಡು ಮಕ್ಕಳು ಓಡಿಬಂದು ಆಕೆಯನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ, ಪಾಪಿ ಕರುಣೆ ಇಲ್ಲದೆ ಮಕ್ಕಳ ಮೇಲೆಯೂ ಹಲ್ಲೆ ನಡೆಸಿದ್ದಾನೆ. ಉತ್ತರ ಪ್ರದೇಶದ ಟಾಲ್ಕಟೋರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಂತೋಷ್ ಯಾದವ್ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ, ಆತ ಬೇರೊಬ್ಬಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ.
ಈಗ ಪತಿ ಸಂತೋಷ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಿಂದೆ ಕೂಡ ಹೀಗೆ ನಡೆದಿತ್ತು. ಪೊಲೀಸರು ಎರಡೂ ಕಡೆಯವರನ್ನು ಕರೆಸಿ ಸಮಾಧಾನ ಪಡಿಸಿ ಮನೆಗೆ ಕಳುಹಿಸಿದ್ದಾರೆ. ಇದಾದ ಮೇಲೆ ಸಂತೋಷ್ ಕೂಡ ಪೊಲೀಸರ ಮುಂದೆ ಪತ್ನಿ ಬಳಿ ಕ್ಷಮೆ ಕೇಳಿದ್ದ. ಆದರೆ, ಮತ್ತೆ ಆತ ತನ್ನ ಚಾಳಿ ಮುಂದುವರೆಸಿದ್ದ.
ಗೆಳತಿಯ ಜತೆ ಹೋಟೆಲ್, ಊರೂರು ಸುತ್ತಿದ್ದಾನೆ, ಇದನ್ನು ವಿರೋಧಿಸಿ ಮತ್ತೆ ಪತ್ನಿ ಪ್ರತಿಭಟಿಸಿದ್ದಾಳೆ, ಇದಕ್ಕೆ ಕೋಪಗೊಂಡ ವ್ಯಕ್ತಿ ಪತ್ನಿಗೆ ಫಿನಾಯಿಲ್ ಕುಡಿಸಿ, ವಿತೃತಿ ಮೆರೆದಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.