ಗುವಾಹಟಿ : ಪಾಪಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿ ನದಿಗೆ ಶವ ಎಸೆದಿರುವ ಘಟನೆ ಅಸ್ಸಾಂನ ಗುವಾಹಟಿಯ ಕಮ್ರೂಪ್ (ಮೆಟ್ರೋ)ದಲ್ಲಿ ನಡೆದಿದೆ.
ಈ ಪಾಪಿಯನ್ನು ಆಟೋ ಚಾಲಕ ಎಂದು ಗುರುತಿಸಲಾಗಿದ್ದು, ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಾಲಕಿ 8ನೇ ತರಗತಿಯಲ್ಲಿ ಓದುತ್ತಿದ್ದು, ಮೊಬೈಲ್ಗೆ ರೀಚಾರ್ಜ್ ಮಾಡಿಸಲು ಮೊಬೈಲ್ ಅಂಗಡಿಗೆ ರಾತ್ರಿ ವೇಳೆ ತೆರಳಿದ್ದಾಳೆ.
ಆನಂತರ ಅವಳು ಕಾಣೆಯಾಗಿದ್ದಳು. ಆಕೆಯ ಶವ ಶುಕ್ರವಾರ ಸೋನಾಪುರದ ದಿಗರು ನದಿಯಲ್ಲಿ ಪತ್ತೆಯಾಗಿದ್ದು. ಸ್ಥಳೀಯರು ಸೋನಾಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಟೋ ಚಾಲಕನನ್ನು ಬಂಧಿಸಿದ್ದಾರೆ. ಈತ ತಾನು ಮಾಡಿದ ಹೇಯ ಕೃತ್ಯ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ.








