ಅಮವಾಸ್ಯೆಯ ಹಿನ್ನೆಲೆಯಲ್ಲಿ 8 ವರ್ಷದ ಬಾಲಕನನ್ನು ಬಲಿ ಕೊಟ್ಟಿರುವ ಘಟನೆಯೊಂದು ಹೈದರಾಬಾದ್ನ (Hyderabad) ಸನತ್ ನಗರದಲ್ಲಿ ಬೆಳಕಿಗೆ ಬಂದಿದೆ.
ಬಾಲಕನನ್ನು ನರಬಲಿ (Human Sacrifice) ಕೊಡಲಾಗಿದೆ ಎಂಬ ಅನುಮಾನ ಮೂಡುತ್ತಿದ್ದು, ಬಾಲಕನನ್ನು ಅಬ್ದುಲ್ ವಹೀದ್ ಎಂದು ಪೊಲೀಸರು (Police) ಗುರುತಿಸಲಾಗಿದೆ. ಬಾಲಕನನ್ನು ತೃತೀಯ ಲಿಂಗಿಯೊಬ್ಬರು ಬಲಿ ಕೊಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಮವಾಸ್ಯೆಯಂದು ತೃತೀಯಲಿಂಗಿಯೊಬ್ಬರು ಬಾಲಕನನ್ನು ಬಲಿಕೊಟ್ಟು ನಂತರ ಬಾಲಕನ ದೇಹವನ್ನು ಕಾಲುವೆಗೆ ಎಸೆದಿದ್ದಾರೆ ಎಂಬ ಆರೋಪನ್ನು ಸ್ಥಳೀಯರು ಮಾಡಿದ್ದರು.
ಸ್ಥಳಕ್ಕೆ ತೆರಳಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ನಾಲೆಯೊಂದರಲ್ಲಿ ಮೃತ ಬಾಲಕನ ಶವ ಪತ್ತೆಯಾಗಿದೆ. ಪೊಲೀಸರು ಬಾಲಕನನ್ನು ಅಬ್ದುಲ್ ವಹೀದ್ ಎಂದು ಗುರುತಿಸಿದ್ದಾರೆ.
ಇನ್ನು ಬಾಲಕನ ಸಾವಿಗೆ ಇಮ್ರಾನ್ ಎಂಬ ಸಲಿಂಗಿ ಕಾರಣ ಎಂದು ಆರೋಪಿಸಿ ಬಾಲಕನ ಕುಟುಂಬಸ್ಥರು ಹಿಜಿಡಾ ಕಾರಣ ಎಂದು ಆರೋಪಿಸಿದ್ದಾರೆ. ಪೊಲೀಸರು ಇಮ್ರಾನ್ನನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆಬಾಲಕನನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ನಾಲೆಯಲ್ಲಿ ಎಸೆದಿರುವುದು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ತನಿಖೆಯಲ್ಲಿ ಈ ಕೊಲೆಗೆ ಇಮ್ರಾನ್ಗೆ ಕೆಲವರು ಕೈಜೋಡಿಸಿದ್ದಾರೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.