ಡಬ್ಲ್ಯುಟಿಎ ಫೈನಲ್ಸ್ ಗೆದ್ದ ಗಾರ್ಬಿನ್ ಮುಗರುಜಾ

1 min read

ಆರನೇ ಶ್ರೇಯಾಂಕಿತ ಸ್ಪೇನ್ ನ ಗಾರ್ಬಿನ್ ಮುಗರುಜಾ ಅವರು ಡಬ್ಲ್ಯುಟಿಎ ಫೈನಲ್ಸ್ ಪ್ರಶಸ್ತಿಯನ್ನು ಚೊಚ್ಚಲಬಾರಿಗೆ ಎತ್ತಿ ಸಂಭ್ರಮಿಸಿದ್ದಾರೆ.
ಮೆಕ್ಸಿಕೋದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಗಾರ್ಬಿನ್ 6-3, 7-5 ರಿಂದ ಆನೆಟ್ಟ್ ಕೊಂಟಾವೀಟ್ ಅವರನ್ನು ಎರಡು ನೇರ ಸೆಟ್ ಗಳಲ್ಲಿ ಮಣಿಸಿ ಮೊದಲ ಬಾರಿಗೆ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಎರಡು ಬಾರಿ ಗ್ರ್ಯಾನ್ ಸ್ಲ್ಯಾಮ್ ವಿಜೇತೆ ಮುಗರುಜಾ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದರು.

“ಈ ಪ್ರಶಸ್ತಿಯನ್ನು ಗೆದ್ದಿರುವುದು ನಿಜಕ್ಕೂ ಸಂತಸ ತಂದಿದೆ. ಈ ಟೂರ್ನಿಯ ಆರಂಭದಲ್ಲಿ ನಾನು ಕೊಂಚ ಹಿನ್ನಡೆ ಅನುಭವಿಸಿದ್ದೆ. ನಂತರ ಪಂದ್ಯಗಳನ್ನು ಆಡಿದಂತೆ ಲಯ ಕಂಡುಕೊಂಡೆ. ನನ್ನ ಆಟ ನನಗೆ ಖುಷಿ ನೀಡಿದೆ” ಎಂದು ಪ್ರಶಸ್ತಿ ವಿಜೇತೆ ಗಾರ್ಬಿನ್ ಮುಗರುಜಾ ತಿಳಿಸಿದ್ದಾರೆ.

 

100 % ಸಸ್ಪೆನ್ಸ್ ಥ್ರಿಲ್ಲಿಂಗ್ ನಿಂದ ಭರಪೂರ , ಅಧ್ಬುತ ಸಿನಿಮಾ “100”

ಭಾರಿ ಮಳೆ ಹಿನ್ನಲೆ ಕೋಲಾರ – ಚಿಕ್ಕಬಳ್ಳಪುರ ಶಾಲೆಗಳಿಗೆ ರಜೆ

 

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd