ನಿದ್ರೆ ಬರುತ್ತಿಲ್ಲವೇ…? ಹಾಗಾದ್ರೆ ಈ ಸಲಹೆಗಳನ್ನ ಪಾಲಿಸಿ..!
ರಾತ್ರಿ ವೇಳೆ ನಿದ್ರೆ ಬರುತ್ತಿಲ್ಲವೇ..? ಬೆಡ್ ಮೇಲೆ ಆ ಕಡೆ ಈ ಕಡೆ ಒದ್ದಾಡಿದ್ರೂ ಕಣ್ಣು ಮುಚ್ಚುತ್ತಿಲ್ಲವೇ..? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ ಚೆನ್ನಾಗಿ ನಿದ್ರೆ ಮಾಡಿ..
* ಮಲಗುವ ಮುನ್ನ ನಾಟಿ ಹಸುವಿನ ತುಪ್ಪವನ್ನು ಉಗುರುಬೆಚ್ಚಗೆ ಮಾಡಿ ಮೂಗಿನ ರಂಧ್ರಗಳಲ್ಲಿ ಎರಡು ಹನಿಗಳನ್ನು ಹಾಕಿಕೊಳ್ಳಬೇಕು.
*ಗಸಗಸೆಯನ್ನು ಹುರಿದು ತೆಳುವಾದ ಬಟ್ಟೆಯಲ್ಲಿ ಸುತ್ತಿ ಮಲಗುವ ಮುನ್ನ ಅದರ ವಾಸನೆಯನ್ನು ಎಳೆದುಕೊಳ್ಳಬೇಕು.
*ನಿಮ್ಮ ಬೆರಳುಗಳಿಂದ ಅಥವಾ ಬಾಚಣಿಗೆಯಿಂದ ಕೂದಲನ್ನು ನಿಧಾನವಾಗಿ ಬಾಚಿಕೊಳ್ಳಿ.
* ಕಾಲುಗಳ ಅಡಿಭಾಗವನ್ನು ಕೈಗಳಿಂದ ಮೃದುವಾಗಿ ಮಸಾಜ್ ಮಾಡಿಕೊಳ್ಳಿ
*ರಾತ್ರಿ ಮಲಗುವ ಮುನ್ನ ಪಾದದ ಅಡಿಭಾಗಕ್ಕೆ ಕ್ಯಾಸ್ಟರ್ ಆಯಿಲ್ ಅಥವಾ ಎಳ್ಳೆಣ್ಣೆ ಅಥವಾ ತೆಂಗಿನೆಣ್ಣೆಯಿಂದ ಮಸಾಜ್ ಮಾಡಿ.
*ರಾತ್ರಿಯಲ್ಲಿ ಉಗುರುಬೆಚ್ಚಗಿನ ಹಾಲನ್ನು ಕುಡಿಯಿರಿ.
*ಮಲಗುವ ಎರಡು ಗಂಟೆಗಳ ಮೊದಲು ಮೊಬೈಲ್ ಫೋನ್ ನೋಡುವುದನ್ನು ನಿಲ್ಲಿಸಿ. ಜೊತೆಗೆ ರಾತ್ರಿ ವೇಳೆ ಮೊಬೈಲ್ ಫೋನ್ ಅನ್ನು ತಲೆಯ ಪಕ್ಕದಲ್ಲಿಟ್ಟರೆ ವಿಕಿರಣದ ಪ್ರಭಾವದಿಂದ ಸರಿಯಾಗಿ ನಿದ್ದೆ ಬರುವುದಿಲ್ಲ. ಹಾಗಾಗಿ ಮೊಬೈಲ್ ಅನ್ನು ದೂರ ಇಡುವುದು ಉತ್ತಮ.
*ಪ್ರತಿ ರಾತ್ರಿ ಮಲಗುವ ಮುನ್ನ ನೀವು ಸ್ವಲ್ಪ ಸಮಯದವರೆಗೆ ನಿಮ್ಮ ಕಣ್ಣುಗಳನ್ನು ಮುಚ್ಚಿ ಧ್ಯಾನ ಮಾಡಬೇಕು
*ಓಂಕಾರ ಅಥವಾ ಮೃದುವಾದ ಶಾಸ್ತ್ರೀಯ ಸಂಗೀತವನ್ನು ಕೇಳುತ್ತಾ ಶಾಂತವಾಗಿ ನಿಮ್ಮ ಕಣ್ಣುಗಳನ್ನು ಮುಚ್ಚಿ ಉಸಿರಾಟದ ಮೇಲೆ ಕೇಂದ್ರೀಕರಿಸುವ ಮೂಲಕ ಶಾಂತ ನಿದ್ರೆಯನ್ನು ಸಾಧಿಸಬಹುದು.