India | ಪಿಂಕ್ ಬಾಲ್ ಟೆಸ್ಟ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಹೊಸ ದಾಖಲೆ
ಶ್ರೀಲಂಕಾ ವಿರುದ್ಧ ಬೆಂಗಳೂರಿನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅಪರೂಪದ ದಾಖಲೆ ಮಾಡಿದೆ.
ಈ ಪಂದ್ಯ ಮೊದಲ ಬರೋಬ್ಬರಿ 16 ವಿಕೆಟ್ ಉರುಳಿವೆ. ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳ ಇತಿಹಾಸದಲ್ಲಿ ಮೊದಲ ದಿನವೇ ಇಷ್ಟು ವಿಕೆಟ್ ಬಿದ್ದಿದ್ದು ಇದೇ ಮೊದಲು.
2017 ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನಡುವಿನ ಪಂದ್ಯದಲ್ಲಿ 13, 2018 ರಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ 13, 2019 ರಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ 13 ಮತ್ತು 2021 ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಪಂದ್ಯದಲ್ಲಿ 13 ವಿಕೆಟ್ ಗಳು ಉರುಳಿದ್ದವು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಇನಿಂಗ್ಸ್ ನಲ್ಲಿ 252 ರನ್ ಗಳಿಗೆ ಆಲೌಟ್ ಆಗಿತ್ತು.
ಶ್ರೇಯಸ್ ಅಯ್ಯರ್ (92) ಏಕಾಂಗಿಯಾಗಿ ಭಾರತವನ್ನು ಗೌರವಾನ್ವಿತ ಸ್ಕೋರ್ ನಡೆಗೆ ಮುನ್ನಡೆಸಿದರು.
ಲಂಕಾ ಬೌಲರ್‌ಗಳ ಪೈಕಿ ಲಸಿತ್ ಎಂಬುಲ್ಡೆನಿಯಾ, ಪ್ರವೀಣ್ ಜಯವಿಕ್ರಮ 3, ಧನಂಜಯ ಡಿಸಿಲ್ವಾ 2, ಸುರಂಗ ಲಕ್ಮಲ್ 1 ವಿಕೆಟ್ ಪಡೆದರು.
ನಂತರ ಬ್ಯಾಟಿಂಗ್ ಮಾಡಿದ ಶ್ರೀಲಂಕಾವನ್ನು ಭಾರತೀಯ ಬೌಲರ್‌ಗಳಾದ ಬುಮ್ರಾ (3/15), ಶಮಿ (2/18) ಮತ್ತು ಅಕ್ಷರ್ ಪಟೇಲ್ (1/21) ಚೆಂಡಾಡಿದರು.
ಇನ್ನು ಶ್ರೀಲಂಕಾ ತಂಡ ಮೊದಲ ಇನ್ನಿಂಗ್ಸ್ 109 ರನ್ ಗಳಿಗೆ ಆಲೌಟ್ ಆಗಿದೆ. 143 ರನ್ ಗಳ ಲೀಡ್ ನೊಂದಿಗೆ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ ಆರಂಭಿಸಿದೆ.
slvsind test match 16-wickets-first-day-highest-ever-pink-ball-test