ರಾಜ್ಯ ಕಂಡ ಜನಪ್ರಿಯ ಸಿಎಂ ಎಸ್.ಎಂ. ಕೃಷ್ಣ ಇನ್ನು ನೆನಪು ಮಾತ್ರ. ಅವರ ಅಂತ್ಯ ಸಂಸ್ಕಾರ ಇಂದು ಸಂಜೆ ಅವರ ಹುಟ್ಟೂರು ಸೋಮನಹಳ್ಳಿಯಲ್ಲಿ ನಡೆಯಲಿದೆ. ಕೃಷ್ಣ ಅವರು ಜನಪ್ರಿಯ ಯೋಜನೆಗಳ ಜೊತೆಗೆ ಅನೇಕ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ.
S.M.ರವರ ಅಂಬಾಸಿಡರ್ ಕಾರು ನೆನಪುಗಳೊಂದಿಗೆ ಸ್ತಬ್ಧ
ಎಸ್.ಎಂ. ಕೃಷ್ಣ ಅವರು ಬಳಸುತ್ತಿದ್ದ ಅಂಬಾಸಿಡರ್ ಕಾರು ಇದೀಗ ಸೋಮನಹಳ್ಳಿಯಲ್ಲಿರುವ ಅವರ ನಿವಾಸದಲ್ಲಿ ಅನಾಥವಾಗಿ ನಿಂತಿದೆ.ಈ ಹಿಂದೆ ತಮ್ಮ ಯಾವುದೇ ಕೆಲಸಗಳಿರಲಿ ಇದೇ ಕಾರಿನಲ್ಲೇ ಅವರು ಪ್ರಯಾಣಿಸುತ್ತಿದ್ದರು.ಆದರೆ ಈಗ ಅದೂ ತನ್ನ ಪಯಣಕ್ಕೆ ಬ್ರೇಕ್ ಹಾಕಿ ಇತಿಹಾಸದ ಪುಟ ಸೇರುವ ಕಾಲವು ಸನ್ನಿಹಿತವಾಗಿದೆ ಅಲ್ವಾ….