Smartphone Charging Tips: ನಿಮ್ಮ ಸ್ಮಾರ್ಟ್ಫೋನ್ ಸ್ಲೋ ಚಾರ್ಜ್ ಆಗುತ್ತಿದ್ದರೆ ಈ ಸಲಹೆ ಪಾಲಿಸಿ…
ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್ಫೋನ್ ನಮ್ಮ ಅನಿವಾರ್ಯತೆ. ಅನೇಕ ಪ್ರಮುಖ ಕೆಲಸಗಳನ್ನ ಮೊಬೈಲ್ ಫೋನ್ ಮೂಲಕ ಸುಲಭವಾಗಿ ಮುಗಿಸಿಕೊಳ್ಳುತ್ತಿದ್ದೇವೆ. ನಮ್ಮ ದಿನನಿತ್ಯದ ಜೀವನಶೈಲಿ ಬದಲಾಯಿಸುವಲ್ಲಿ ಮೊಬೈಲ್ ಪ್ರಮುಖ ಪಾತ್ರವನ್ನು ವಹಿಸಿದೆ.
ಉತ್ತಮ ಸ್ಮಾರ್ಟ್ಫೋನ್ ಖರೀದಿಸಲು ಸಾಕಷ್ಟು ಆಯ್ಕೆಗಳಿಗೆ ಎಡತಾಕುತ್ತೇವೆ. ಅದರಲ್ಲೂ ಬ್ಯಾಟರಿ ಮತ್ತು ಚಾರ್ಜಿಂಗ್ ಸಾಮರ್ಥ್ಯಕ್ಕೆ ತುಂಬಾ ಪ್ರಾಮುಖ್ಯತೆ ನೀಡುತ್ತೇವೆ. ಆದ್ರೆ ಕೆಲದಿನಗಳ ಬಳಕೆಯ ನಂತರ ಮೊಬೈಲ್ ನಿಧಾನವಾಗಿ ಚಾರ್ಜ್ ಆಗಲು ಪ್ರಾರಂಭಿಸುತ್ತದೆ.
ನೀವು ಸಹ ಈ ಸಮಸ್ಯೆಯನ್ನ ಎದುರಿಸಿದ್ದರೆ ನಾವು ನಿಮಗೆ ಕೆಲವು ವಿಶೇಷ ಸಲಹೆಗಳನ್ನ ನೀಡಲಿದ್ದೇವೆ. ಈ ಸಲಹೆಗಳನ್ನ ಅಳವಡಿಸಿಕೊಂಡ್ರೆ ಎಂದಿನಂತೆ ನಿಮ್ಮ ಮೊಬೈಲ್ ವೇಗವಾಗಿ ಚಾರ್ಜ್ ಆಗುತ್ತದೆ.
ಸ್ಮಾರ್ಟ್ಫೋನ್ ಚಾರ್ಜಿಂಗ್ ಸಲಹೆ 1
ಸಾಮಾನ್ಯವಾಗಿ ಜನರು ಚಾರ್ಜ್ ಮಾಡುವಾಗ ಸ್ಮಾರ್ಟ್ಫೋನ್ ಬಳಸುವ ಅಭ್ಯಾಸವನ್ನು ಹೊಂದಿರುತ್ತಾರೆ. ನೀವು ಸಹ ಈ ತಪ್ಪನ್ನು ಮಾಡುತ್ತಿದ್ದರೆ ಮೊದಲು ಬಿಟ್ಟು ಬಿಡಿ. ಈಗ ಮಾಡುವುದರಿಂದ ಸ್ಮಾರ್ಟ್ಫೋನ್ ವೇಗವಾಗಿ ಚಾರ್ಜ್ ಆಗುವುದಿಲ್ಲ. ಇದಲ್ಲದೆ, ಚಾರ್ಜಿಂಗ್ ಸಮಯದಲ್ಲಿ ಸ್ಮಾರ್ಟ್ಫೋನ್ ಅನ್ನು ಬಳಸಿದಾಗ ಅದನ್ನು ಸ್ಫೋಟಗೊಳ್ಳುವ ಸಾಧ್ಯತೆಯು ಹೆಚ್ಚಾಗುತ್ತದೆ.
ಸ್ಮಾರ್ಟ್ಫೋನ್ ಚಾರ್ಜಿಂಗ್ ಸಲಹೆ 2
ಸಾಮಾನ್ಯವಾಗಿ ಅನೇಕ ಜನರು ರಾತ್ರಿಯಲ್ಲಿ ಫೋನ್ ಚಾರ್ಜ್ಗಿಟ್ಟು ನಿದ್ರೆಗೆ ಜಾರುತ್ತಾರೆ. ಈ ರೀತಿ ಮಾಡುವುದರಿಂದ ಫೋನ್ನ ಬ್ಯಾಟರಿ ಮತ್ತು ಅದರ ಚಾರ್ಜಿಂಗ್ ಸಾಮರ್ಥ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಲಗುವಾಗ ಮೊಬೈಲ್ ಅನ್ನು ಚಾರ್ಜ್ಗೆ ಇಡುವ ಅಭ್ಯಾಸ ಬೇಡ.
ಸ್ಮಾರ್ಟ್ಫೋನ್ ಚಾರ್ಜಿಂಗ್ ಸಲಹೆ 3
ಇದಲ್ಲದೆ, ನಿಮ್ಮ ಫೋನ್ ನಿಧಾನವಾಗಿ ಚಾರ್ಜ್ ಆಗುತ್ತಿದೆ ಎನಿಸಿದರೆ ಆ ಸಂದರ್ಭದಲ್ಲಿ ಏರೋಪ್ಲೇನ್ ಮೋಡ್ ಅನ್ನು ಬಳಸಬೇಕು. ಏರ್ಪ್ಲೇನ್ ಮೋಡ್ ಅನ್ನು ಆನ್ ಮಾಡಿದ ನಂತರ, ಫೋನ್ ಮೊದಲಿಗಿಂತ ವೇಗವಾಗಿ ಚಾರ್ಜ್ ಆಗುತ್ತದೆ.
ಸ್ಮಾರ್ಟ್ಫೋನ್ ಚಾರ್ಜಿಂಗ್ ಸಲಹೆ 4
ಸ್ಮಾರ್ಟ್ಫೋನ್ ಚಾರ್ಜಿಂಗ್ ಸಮಯದಲ್ಲಿ ಬ್ಲೂಟೂತ್, ಜಿಪಿಎಸ್ ವೈಫೈ ಆನ್ನಲ್ಲಿದ್ದರೆ ಫೋನ್ ನಿಧಾನವಾಗಿ ಚಾರ್ಜಾಗುತ್ತೆ. ಹಾಗಾಗಿ ಫೋನ್ ಅನ್ನು ಚಾರ್ಜ್ ಮಾಡುವಾಗ, ಬ್ಲೂಟೂತ್, ಜಿಪಿಎಸ್ ಮತ್ತು ವೈಫೈ ಅನ್ನು ಆಫ್ ಮಾಡಿ..