ಜಮ್ಮು ಕಾಶ್ಮೀರದಲ್ಲಿ ಕೋಲಾರದ ಯೋಧ ಆತ್ಮಹತ್ಯೆ jummu saaksha tv
ಕೋಲಾರ : ಜಿಲ್ಲೆಯ ಕೆಜಿಎಫ್ ನಗರದ ಯೋಧನೊರ್ವ ವಿಷ ಸೇವಿಸಿ ಜಮ್ಮು ಕಾಶ್ಮೀರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಚಾಂಪಿಯನ್ ರೀಫ್ ನಿವಾಸಿ ದಿಲೀಪ್ (34) ಆತ್ಮಹತ್ಯೆಗೆ ಶರಣಾದ ಯೋಧ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಜಮ್ಮು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿಲೀಪ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.
ಈ ವೇಳೆ, ದೆಹಲಿ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಇಂದು ಸಂಜೆ ಅಥವಾ ನಾಳೆ ದಿಲೀಪ್ ಪಾರ್ಥಿವ ಶರೀರ ಕೆಜಿಎಫ್ ತಲುಪುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.