ಅಯೋಧ್ಯೆ: ಉತ್ತರ ಪ್ರದೇಶದ ರಾಮಜನ್ಮಭೂಮಿ (Ayodhya Ram Mandir) ಕಾಂಪ್ಲೆಕ್ಸ್ ನಲ್ಲಿ ಎಸ್ಎಸ್ಎಫ್ ಯೋಧರೊಬ್ಬರು ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.
ಶತ್ರುಘ್ನ ವಿಶ್ವಕರ್ಮ ಸಾವನ್ನಪ್ಪಿದ ವ್ಯಕ್ತಿ. ಆದರೆ, ಘಟನೆಯ ನಿಖರ ಕಾರಣ ತಿಳಿದು ಬಂದಿಲ್ಲ. ಬುಧವಾರ ಬೆಳಗಿನ 5 ಗಂಟೆಗೆ ಈ ಘಟನೆ ತಿಳಿದಿದೆ ಎನ್ಲನಾಗಿದೆ. ರಾಮಮಂದಿರದಿಂದ ಕೇವಲ 150 ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ರಾಮಜನ್ಮಭೂಮಿಯ ಭದ್ರತೆಗೆ ಎಸ್ಎಸ್ಎಫ್ ಯೋಧರನ್ನು ನಿಯೋಜಿಸಲಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈಗಾಗಲೇ ಪೊಲೀಸರು ಮೃತ ಯೋಧನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಕುಟುಂಬಸ್ಥರು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ.