ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು
ರಾಜ್ಯದಲ್ಲಿ ರಾಜಕೀಯ ಕಾವು ರಂಗೇರಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಗೆಲುವಿಗಾಗಿ ತಂತ್ರ- ಪ್ರತಿ ತಂತ್ರ ಹೆಣೆಯುತ್ತಿದ್ದಾರೆ. ಮತದಾರರನ್ನು ಸೆಳೆಯುವುದಕ್ಕಾಗಿ ಪಕ್ಷಗಳು ಸೆಲೆಬ್ರಿಟಿಗಳನ್ನು ಕರೆ ತರುತ್ತಿದ್ದಾರೆ. ಹಾಲಿ ಸರ್ಕಾರ ತಾನು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೊಗಳುತ್ತಿದ್ದರೆ, ವಿರೋಧ ಪಕ್ಷದವರು ಸರ್ಕಾರದ ತಪ್ಪು ಮುಂದಿಡುತ್ತಿದ್ದಾರೆ. ಇದರ ಮಧ್ಯೆ ಹಲವು ಕ್ಷೇತ್ರಗಳು ಮಾತ್ರ ಜನರನ್ನು ತನ್ನತ್ತ ಹೆಚ್ಚಾಗಿ ಸೆಳೆಯುತ್ತಿವೆ. ಈ ಪೈಕಿ ವರುಣಾ ಕ್ಷೇತ್ರ ಕೂಡ ಒಂದು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧಿಸಿರುವ ಈ ಕ್ಷೇತ್ರದತ್ತ ಇಡೀ ದೇಶವೇ ಕಣ್ಣಿಟ್ಟಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳುತ್ತ ಮತ್ತೊಮ್ಮೆ ಗೆದ್ದು ಸಿಎಂ ಆಗುವ ಕನಸು ಕಾಣುತ್ತಿದ್ದರೆ, ಬಿಜೆಪಿ ಹಾಗೂ ಜೆಡಿಎಸ್ ಕ್ಷೇತ್ರಗಳು ಹೇಗಾದರೂ ಮಾಡಿ ಸೋಲಿಸಬೇಕು ಎಂದು ಪಣ ತೊಟ್ಟಿವೆ. ಹೀಗಾಗಿ ಬಿಜೆಪಿ ಪಕ್ಷವು ವಿ.ಸೋಮಣ್ಣ ಅವರನ್ನು ಕಣಕ್ಕೆ ಇಳಿಸಿದೆ.
ಸದ್ಯ ಅಲ್ಲಿನ ಸ್ಥಿತಿಗತಿಗಳನ್ನು ನೋಡಲು ಶೇರ್ ಚಾಟ್ ಸಹಾಯದಿಂದ ಸರ್ವೇ ಮಾಡಿದಾಗ ಬಿಜೆಪಿ ಪಕ್ಷವು ಈ ಸರ್ವೇಯಲ್ಲಿ ಮುಂದಿದೆ. ಈ ಸರ್ವೇಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪರ ಶೇ. 17ರಷ್ಟು ಮತಗಳು ಬಿದ್ದಿದ್ದರೆ, ವಿ.ಸೋಮಣ್ಣ ಪರ ಶೇ. 50 ಹಾಗೂ ಜೆಡಿಎಸ್ ಅಭ್ಯರ್ಥಿ ಡಾ. ಭಾರತಿ ಶಂಕರ್ ಪರ ಶೇ. 30ರಷ್ಟು ಮತಗಳು ಬಿದ್ದಿವೆ.
ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.
ಇನ್ನು ಮುಂದೆ ಯಾರು ಬೇಕಾದರೂ ಮೆಟಾ ಬ್ಲೂ ಟಿಕ್ ಪಡೆಯಬಹುದು. ಮೆಟಾ ವೆರಿಫೈಡ್ ಸೇವೆಯು ಭಾರತದಲ್ಲಿ Instagram ಅಥವಾ Facebook ನಲ್ಲಿ ಖರೀದಿಸಲು ಲಭ್ಯವಿದೆ ಎಂದು ಕಂಪನಿ...