ಪಾಪಿ ಸುತ, ಮಾತಾ-ಪಿತರನ್ನೇ ಕೊಂದ
ತಿರುವನಂತಪುರಂ: ರಾಕ್ಷಸ ಮಗ ತಂದೆ-ತಾಯಿಯನ್ನು ಅಟ್ಟಾಡಿಸಿಕೊಂಡು ಕನಿಷ್ಠ ಕನಿಕರವಿಲ್ಲದೆ ಮಚ್ಚಿನಿಂದ ಕೊಚ್ಚಿ ಕೊಲೆಗೈದ ಘಟನೆ ಕೇರಳದ ತ್ರಿಶೂರ್ ನಲ್ಲಿ ನಡೆದಿದೆ.
ಕುಟ್ಟನ್ ಹಾಗೂ ಚಂದ್ರಿಕಾ ಮಗನಿಂದ ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಇನ್ನೂ ಆರೋಪಿ ಮಗನ್ನು ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನಲೇ ಘಟನೆ ಸಂಭಂವಿಸಿದೆ ಎನ್ನಲಾಗುತ್ತಿದೆ.
ನಡೆದಿದ್ದೇನು?: ಮಗ ಮನೆಯಲ್ಲಿ ತಂದೆ-ತಾಯಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ. ಇಂದು ಭಾನುವಾರ ಬೆಳಿಗ್ಗೆ ಜಗಳ ತಾರಕಕ್ಕೇರಿದೆ. ನಂತರ ಮಗ ಅನಿಶ್
ಮನೆ ಮುಂದೆ ರಸ್ತೆ ಬದಿಯಲ್ಲಿ ಇಬ್ಬರ ಮೃತದೇಹ ದೊರೆತಿದೆ. ಹೆತ್ತವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆಗೂ ಮುನ್ನ ಇಬ್ಬರನ್ನು ರಸ್ತೆಯಲ್ಲಿ ಅಟ್ಟಿಸಿಕೊಂಡು ಹೋಗಿದ್ದಾನೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ
ಸದ್ಯ ಅನೀಶ್ ಬಮಧಿಸಿರುವ ಪೊಲಿಸರು, ಕೊಲೆಯ ಹಿಂದಿನ ಉದ್ದೇಶದ ಕುರಿತು ತನಿಖೆ ನಡೆಸುತ್ತಿದ್ದಾರೆ.








