ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಆರೋಪಿ, ನಟ ದರ್ಶನ್ (Darshan) ನೋಡಲು ಬಳ್ಳಾರಿ ಜೈಲಿಗೆ ಪುತ್ರ ವಿನೀಶ್ (Vineesh) ಹಾಗೂ ವಿಜಯಲಕ್ಷ್ಮಿ (Vijaylakshmi) ಆಗಮಿಸಿದ್ದಾರೆ.
ಮೊದಲ ಬಾರಿಗೆ ಅಪ್ಪನನ್ನು ನೋಡಲು ಬಳ್ಳಾರಿಗೆ ಜೈಲಿಗೆ ವಿನೀಶ್ ಭೇಟಿ ನೀಡಿದ್ದಾನೆ. ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ 3 ತಿಂಗಳಾಗಿವೆ. ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಪತ್ನಿ ಚರ್ಚೆ ನಡೆಸುತ್ತಿದ್ದಾರೆ. ಪ್ರತಿ ವಾರ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಬಳ್ಳಾರಿ ಜೈಲಿಗೆ ಭೇಟಿ ನೀಡುತ್ತಿದ್ದರು. ಈ ಬಾರಿ ಅಮ್ಮನ ಜೊತೆ ಪುತ್ರ ವಿನೀಶ್ ಬಂದಿದ್ದಾನೆ.
ದರ್ಶನ್ಗೆ ಅಗತ್ಯವಿರುವ ಬಟ್ಟೆ, ಬೆಡ್ ಶಿಟ್ ಮತ್ತು ಬೇಕರಿ ತಿನಿಸುಗಳೊಂದಿಗೆ 2 ಬ್ಯಾಗ್ ಹಿಡಿದು ಆಪ್ತರೊಂದಿಗೆ ಪತ್ನಿ, ಪುತ್ರ ಜೈಲಿಗೆ ಆಗಮಿಸಿದ್ದು, ತಂದೆ ನೋಡಿ ಅತ್ತಿದ್ದಾನೆ ಎನ್ನಲಾಗಿದೆ. ಈ ವೇಳೆ ನಟ ದರ್ಶನ್ ಮಗನನ್ನು ಸಂತೈಸಿದ್ದಾರೆ. ಈ ವೇಳೆ ಪತ್ನಿ ಹಾಗೂ ಮಗನೊಂದಿಗೆ ದರ್ಶನ್ 45 ನಿಮಿಷ ಮಾತನಾಡಿದ್ದಾರೆ.