ಮದುವೆ ಮಾಡಪ್ಪ… ಎಂದ ಮಗನನ್ನೇ ಕೊಂದ ತಂದೆ..!
ಹೈದರಾಬಾದ್ : ಮಕ್ಕಳ ಮದುವೆಗೆ ತಲೆಕೆಡಿಸಿಕೊಂಡು ಎಂಥವರು ಸರಿ ಅಂತ ಹುಡುಕಾಡಿ ಕಾಳಿಯಿಂದ ಅದ್ಧೂರಿಯಾಗಿ ಸಂಭ್ರಮದಿಂದ ಮಕ್ಕಳ ಮದುವೆ ಮಾಡ್ತಾರೆ. ಮಕ್ಕಳ ಮದುವೆಗೆ ಮಕ್ಕಳಿಗಿಂತ ಹೆಚ್ಚು ತಲೆ ಕೆಡಿಸಿಕೊಳ್ಳುವವರು ಪೋಷಕರೇ. ಆದ್ರೆ ಇಲ್ಲೊಬ್ಬ ತಂದೆ ಮಗ ಮದುವೆ ಮಾಡು ಎಂದಿದ್ದಕ್ಕೆ ಅತ್ಯಂತ ಬರ್ಬರವಾಗಿ ಕೊಲೆ ಮಾಡಿ ರಾಕ್ಷಸನಂತೆ ವರ್ತಿಸಿದ್ದಾನೆ.
video : ಹೆಡ್ ಫೋನ್ ಗುಂಗಲ್ಲಿದ್ದ ಮಹಿಳೆ ಮೇಲೆ ಹರಿದ ರೈಲು
ಹೌದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾದ್ ನಗರದಲ್ಲಿ. ಎಲ್ಲಯ್ಯ ಎಂಬಾತ ತನ್ನ ಮಗ ನರೇಶ್ ನನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮಗ ನರೇಶ್ ತಂದೆಯ ಬಳಿ ಮದುವೆ ಮಾಡುವಂತೆ ಪ್ರತಿ ನಿತ್ಯ ಒತ್ತಾಯಿಸುತ್ತಿದ್ದ. ಇದೇ ವಿಚಾರವಾಗಿ ಪ್ರತಿನಿತ್ಯ ಮನೆಯಲ್ಲಿ ಜಗಳವಾಗ್ತಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಶನಿವಾರದಂದು ನಡೆದ ಜಗಳ ತಾರಕಕ್ಕೇರಿದ್ದು, ತಂದೆ ಎಲ್ಲಯ್ಯ ಹತ್ತಿರದಲ್ಲೇ ಇದ್ದಂತ ಕೊಡಲಿಯಿಂದ ಮಗ ನರೇಶ್ ಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಂತ ನರೇಶ್ ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೇ ಚಿಕಿತ್ಸೆ ಫಲಕಾರಿಯಾಗದೇ ನರೇಶ್ ಸಾವನ್ನಪ್ಪಿದ್ದಾನೆ. ಈ ಸಂಬಂಧ ನರೇಶ್ ತಾಯಿ ತನ್ನ ಗಂಡ ಎಲ್ಲಯ್ಯನ ವಿರುದ್ಧ ದೂರು ದಾಖಲಿಸಿದ್ದಾಳೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel