ಚಂದನವನದ ನಿರ್ದೇಶಕ ತರುಣ್ ಸುಧೀರ್ (Tharun Sudheer) ಮತ್ತು ನಟಿ ಸೋನಲ್ (Sonal Monteiro) ಮದುವೆ ಸಮಾರಂಭ ಬಾನುವಾರ ಭರ್ಜರಿಯಾಗಿ, ಹಲವಾರು ಗಣ್ಯರ ಎದುರು ನಡೆಯಿತು. ತಾಳಿ ಕಟ್ಟುವ ವೇಳೆ ನಟಿ ಸೋನಲ್ ಭಾವುಕರಾದ ಸಂದರ್ಭವೂ ನಡೆಯಿತು.
ಇಂದು ಬೆಳಗ್ಗೆ 10.50ಕ್ಕೆ ಬೆಂಗಳೂರಿನ ಪೂರ್ಣಿಮಾ ಪಾಲೇಸ್ ನಲ್ಲಿ ವಿವಾಹ ಕಾರ್ಯಕ್ರಮ ನಡೆಯಿತು. ಚಿತ್ರರಂಗದ ಅನೇಕ ಗಣ್ಯರು, ರಾಜಕಾರಣಿಗಳು, ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿತು. ತಾಳಿ ಕಟ್ಟುವ ಸಂದರ್ಭದಲ್ಲಿ ನಟಿ ಸೋನಲ್ ಭಾವುಕರಾದರು.
ತರುಣ್ -ಸೋನಲ್ ಮದುವೆಗೆ ಅದ್ದೂರಿ ಧಾರೆ ಮಂಟಪ ಸೆಟ್ ಹಾಕಲಾಗಿದೆ. ದಕ್ಷಿಣ ಭಾರತ ಶೈಲಿಯಲ್ಲಿ ಕಲ್ಯಾಣ ಮಂಟಪ ಶೃಂಗರಿಸಲಾಗಿದೆ. ವಿಷ್ಣುವಿನ ದಶಾವತಾರಗಳ ಮಧ್ಯೆ ಕಮಲ ಮಂಟಪದ ಸಿದ್ದತೆ ಮಾಡಿದ್ದು ವಿಶೇಷವಾಗಿತ್ತು. ಹಲವಾರು ಸೆಲೆಬ್ರಿಟಿಗಳು ಬಂದು ನವ ಜೋಡಿಯನ್ನು ಹಾರೈಸಿದ್ದಾರೆ. ಶನಿವಾರ ನಡೆದ ತರುಣ್ ಮತ್ತು ಸೋನಾಲ್ ಆರತಕ್ಷತೆಯಲ್ಲೂ ಚಿತ್ರರಂಗ, ರಾಜಕೀಯ ಗಣ್ಯರು ಭಾಗಿಯಾಗಿದ್ದರು.