ಸೋನಾಲಿ ಫೋಗಟ್ ಕೊಲೆ ಪ್ರಕರಣ: ಅಗತ್ಯ ಬಿದ್ದರೆ CBI ಗೆ ಹಸ್ತಾಂತರಿಸಲು ಸಿದ್ಧ – ಗೋವಾ CM
ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ಸೋನಾಲಿ ಫೋಗಟ್ ಸಾವಿನ ಪ್ರಕರಣವನ್ನು ಅಗತ್ಯವಿದ್ದರೆ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲು ತಮ್ಮ ಸರ್ಕಾರ ಸಿದ್ಧವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭಾನುವಾರ ಹೇಳಿದ್ದಾರೆ. ಸೋನಾಲಿ ಫೋಗಟ್ ಆಗಸ್ಟ್ 22 ರಂದು ಗೋವಾದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಇದುವರೆಗೆ ರಾಜ್ಯ ಪೊಲೀಸರು 5 ಮಂದಿಯನ್ನು ಬಂಧಿಸಿದ್ದಾರೆ. ಇವರಲ್ಲಿ ಸೋನಾಲಿ ಫೋಗಾಟ್ ನ ಇಬ್ಬರು ಸಹಚರರು ಸೇರಿದ್ದು, ಕೊಲೆ ಆರೋಪದಡಿ ಬಂಧಿಸಲಾಗಿದೆ.
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಈಗಾಗಲೇ ಮಾತನಾಡಿದ್ದು, ಈ ಬಗ್ಗೆ ವಿಸ್ತೃತ ತನಿಖೆಗೆ ಅವರು ಮನವಿ ಮಾಡಿದ್ದಾರೆ ಎಂದು ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ. ಫೋಗಟ್ ಕುಟುಂಬದವರು ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಖಟ್ಟರ್ ಹೇಳಿದ್ದರು ಎಂದು ಸಾವಂತ್ ಹೇಳಿದರು. ಗೋವಾ ಮುಖ್ಯಮಂತ್ರಿ, “ನನಗೆ ಇದರಲ್ಲಿ ಯಾವುದೇ ತೊಂದರೆ ಇಲ್ಲ. ಇಂದು ಎಲ್ಲಾ ವಿಧಿವಿಧಾನಗಳು ಪೂರ್ಣಗೊಂಡ ನಂತರ, ಅಗತ್ಯವಿದ್ದರೆ, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗುವುದು”. ಈ ಬಗ್ಗೆ ಗೋವಾ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಸಾವಂತ್ ಹೇಳಿದ್ದಾರೆ.
ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯಲ್ಲಿ ಆಕೆಗೆ ಮೆಥಾಂಫೆಟಮೈನ್ ಎಂಬ ಡಗ್ಸ್ ನೀಡಿರುವುದು ಬೆಳಕಿಗೆ ಬಂದಿದೆ. ಕರ್ಲೀಸ್ ರೆಸ್ಟೋರೆಂಟ್‌ನ ಪಾರ್ಟಿಯಲ್ಲಿ ಸೋನಾಲಿ ಫೋಗಟ್ ಅವರ ಪಿಎ ಸುಧೀರ್ ಸಾಂಗ್ವಾನ್ ಮತ್ತು ಸುಖ್ವಿಂದರ್ ಸಿಂಗ್ ಅವರಿಗೆ ಈ ಡ್ರಗ್ಸ್ ನೀಡಿದ್ದಾರೆ. ಇದೀಗ ಇಬ್ಬರನ್ನೂ 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಮೆಥಾಂಫೆಟಮೈನ್ ಎಂದರೇನು
ಮೆಥಾಂಫೆಟಮೈನ್ ಅತ್ಯಂತ ಶಕ್ತಿಯುತ ಉತ್ತೇಜಕ ಔಷಧವಾಗಿದ್ದು, ನರಮಂಡಲದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದನ್ನು ಸಾಮಾನ್ಯವಾಗಿ ಮೂಗಿನಿಂದ ಎಳೆದುಕೊಳ್ಳುವ ಮೂಲಕ, ಬಾಯಿಂದ ಸೇವಿಸಿಮೂಲಕ ಅಥವಾ ಇಂಜೆಕ್ಷನ್ ಮೂಲಕ ತೆಗೆದಕೊಳ್ಳಲಾಗುತ್ತದೆ. ಸ್ಫಟಿಕ ರೂಪದಲ್ಲಿ, ಗಾಜಿನ ತುಂಡುಗಳಂತೆ ಬಿಳಿಯಾಗಿ ಹೊಳೆಯುತ್ತದೆ. ಇದನ್ನು ಹೆಚ್ಚಾಗಿ ಮಾದಕತೆಯನ್ನು ಹೆಚ್ಚಿಸಲು ಬಳಸಲಾಗುತ್ತದೆ.







