ಸೋನು ಸೂದ್ ರನ್ನ ‘ಮಣಿಕರ್ಣಿಕಾ’ದಿಂದ ಹೊರದಬ್ಬಿದ್ದ ಕಂಗನಾ ಈಗ ‘ರಿಯಲ್ ಹೀರೋ’ಗೆ ಮನವಿ ಮಾಡಿಕೊಂಡಿದ್ದೇಕೆ..?
ಮುಂಬೈ : ಬಾಲಿವುಡ್ ನಟಿ ಕಂಗನಾ ರಣೌತ್ ಒಮದಲ್ಲಾ ಒಂದು ವಿಚಾರಗಳ, ವಿವಾದಗಳು, ಇನ್ನೊಬ್ಬರ ವಿರುದ್ಧ ಆರೋಪಗಳನ್ನ ಮಾಡುತ್ತಲೇ ಸುದ್ದಿಯಲ್ಲಿರೋದು ಹೆಚ್ಚು.. ಅಲ್ಲದೇ ಅವರು ;ಅನೇಕರ ಬಳಿ ದ್ವೇಷ ಕಟ್ಟಿಕೊಮಡಿದ್ದಾರೆ. ಸಾಲದಕ್ಕೆ ರಿಯಲ್ ಹೀರೋ ಸೋನು ಸೂದ್ ಜೊತೆಗೂ ಕೂಡ. ಮಣಿಕರ್ಣಿಕಾ ಸಿನಿಮಾ ಶೂಟಿಂಗ್ ವೇಳೆ ಸೋನು ಸೂದ್ ರನ್ನ ಸಿಇನಿಮಾದಿಂದಲೇ ಕೈಬಿಡುವಂತೆ ಮಾಡಿದ್ದ ಕಂಗನಾ ಆಗ ಸೋನು ಫ್ಯಾನ್ಸ್ ಗಳ ಕೆಂಗಣ್ಣಿಗೂ ಗುರಿಯಾಗಿದ್ರು.
ಇದೀಗ ಇದೇ ಕಂಗನಾ ಸೋನು ಸೂದ್ ಬಳಿ ಟ್ವಿಟ್ಟರ್ ಮೂಲಕ ಮನವಿಯೊಂದನ್ನ ಮಾಡಿದ್ದಾರೆ. ಹೌದು.. ನಟಿ ಕಂಗನಾ ರನೌತ್, ‘ಭಾರತದಲ್ಲಿ ತಯಾರಿಸಲಾದ ಕೊರೊನಾ ಲಸಿಕೆಯನ್ನೇ ಪಡೆಯುವಂತೆ ಪ್ರಚಾರ ಮಾಡಿ’ ಎಂದು ಸೋನು ಸೂದ್ಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ. ಸೋನು ಸೂದ್, ತಮಗೆ ಕೊರೊನಾ ನೆಗೆಟಿವ್ ಆದ ಬಗ್ಗೆ ಮಾಡಿರುವ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಕಂಗನಾ, ‘ಸೋನು ಜೀ, ನೀವು ಕೊರೊನಾ ವ್ಯಾಕ್ಸಿನ್ಮೊದಲ ಡೋಸೇಜ್ ಪಡೆದುಕೊಂಡಿದ್ದಿರಿ, ಹಾಗಾಗಿ ನೀವು ಬಹುಬೇಗ ಹುಷಾರಾಗಿದ್ದೀರಿ. ಭಾರತದಲ್ಲಿ ತಯಾರಾದ ವ್ಯಾಕ್ಸಿನ್ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದಕ್ಕೆ ನೀವೇ ಉದಾಹರಣೆ. ಹೆಚ್ಚು-ಹೆಚ್ಚು ಜನ ಭಾರತದಲ್ಲಿ ತಯಾರಾದ ವ್ಯಾಕ್ಸಿನ್ ಅನ್ನೇ ಬಳಸುವಂತೆ ಮನವಿ ಮಾಡಿ. ಇಲ್ಲವಾದಲ್ಲಿ ವ್ಯಾಕ್ಸಿನ್ಗಳು ಕಳೆದ ಬಾರಿ ಆದಂತೆ ಎಕ್ಸ್ಪೈರ್ ಆಗಿಬಿಡುತ್ತವೆ’ ಎಂದಿದ್ದಾರೆ.ಇದೀಗ ಕಂಗನಾ ಉತ್ತರ ಮತ್ತೆ ಟ್ರೋಲ್ ಗೆ ಗುರಿಯಾಗಿದ್ದು, ನೆಟ್ಟಿಗರು ಕಂಗನಾ ವಿರುದ್ಧ ಹಾಗೂ ಪರ ಕಮೆಂಟ್ ಗಳನ್ನ ಮಾಡುತ್ತಾ ಇದ್ದಾರೆ.
ಏರ್ ಆಂಬ್ಯುಲೆನ್ಸ್ ಮೂಲಕ ಕೊರೊನಾ ಸೋಂಕಿತೆಗೆ ಚಿಕಿತ್ಸೆ ಕೊಡಿಸಿದ ‘ರಿಯಲ್ ಹೀರೋ’ ಸೋನು..!